ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೂನ್ 27 ರಂದು ಫ್ರಾನ್ಸ್‌ನ ಟ್ರಾಫಿಕ್ ಪೊಲೀಸ್, 17 ವರ್ಷದ ಅಲ್ಜೀರಿಯಾ ದೇಶದ ಬಾಲಕ ನಹೇಲ್ ಎಂ ಎನ್ನುವವನ್ನು ಗುಂಡಿಟ್ಟ ಬಳಿಕ ಫ್ರಾನ್ಸ್‌ನಲ್ಲಿ ಆಕ್ರೋಶ ಭುಗಿಲೆದಿದ್ದು, ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ .
ಈವರೆಗೂ ೧೩೩೩ ಕ್ಕೂ ಅಧಿಕ ಜನರ ಬಂದನವಾಗಿದ್ದು,ಅನೇಕರು ಗಾಯಕೊಂಡಿದ್ದಾರೆ. ಈ ನಡುವೆ ಯುರೋಪ್‌ನ ಪ್ರಸಿದ್ಧ ವೈದ್ಯರಾದ ಎನ್.ಜಾನ್ ಕಾಮ್, ಗಲಭೆಯನ್ನು ನಿಯಂತ್ರಿಸಲು ಭಾರತದ ಅಗತ್ಯವಿದೆ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ನಲ್ಲಿ ಬೇಡಿಕೆಯನ್ನೂ ಇರಿಸಿದ ಅವರು, ಫ್ರಾನ್ಸ್‌ನಲ್ಲಿ ಆಗುತ್ತಿರುವ ಗಲಭೆಯನ್ನು ನಿಯಂತ್ರಿಸಲು ಭಾರತವು ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್ ಅವರನ್ನು ತುರ್ತಾಗಿ ಫ್ರಾನ್ಸ್‌ಗೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಟ್ವೀಟ್ ಗೆ ಯೋಗಿ ಆದಿತ್ಯನಾಥ್ ಅವರ ಕಚೇರಿ ಕೂಡ ಪ್ರತಿಕ್ರಿಯೆ ನೀಡಿದ್ದು, ‘ಜಗತ್ತಿನ ಯಾವುದೇ ಭಾಗದಲ್ಲಿ ಉಗ್ರವಾದವು ಗಲಭೆಗಳು, ಅವ್ಯವಸ್ಥೆಗಳು ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯು ಉಂಟಾದಾಗ, ಜಗತ್ತು ಸಾಂತ್ವನವನ್ನು ಹುಡುಕುತ್ತದೆ ಮತ್ತು ಉತ್ತರ ಪ್ರದೇಶದಲ್ಲಿ ಮಹಾರಾಜ್ ಜಿ ಸ್ಥಾಪಿಸಿದ ಕಾನೂನು ಮತ್ತು ಸುವ್ಯವಸ್ಥೆಯ ಪರಿವರ್ತಕ ‘ಯೋಗಿ ಮಾದರಿ’ ಗಾಗಿ ಹಾತೊರೆಯುತ್ತದೆ’ ಎಂದು ಟ್ವೀಟ್ ಮಾಡಿದೆ.
24 ಗಂಟೆಯೊಳಗೆ ಭಾರತ ಸಿಎಂ ಯೋಗಿಯನ್ನು ಫ್ರಾನ್ಸ್‌ಗೆ ಕಳುಹಿಸಬೇಕು’ ಎಂದು ಯುರೋಪಿಯನ್ ವೈದ್ಯರು ಹೇಳಿದ್ದಾರೆ. ಇದಲ್ಲದೇ, ಸಿಎಂ ಯೋಗಿ ಬುಲ್ಡೋಜರ್ ಇರುವ ಕಾರ್ಟೂನ್ ಫೋಟೋವನ್ನು ಪೋಸ್ಟ್ ಮಾಡ ‘ಭಾರತವನ್ನು ಆಳಲು ಮತ್ತು ಕಾನೂನು/ಸುವ್ಯವಸ್ಥೆ ಕಾಪಾಡಲು ಇದೊಂದೇ ದಾರಿ. ಉಳಿದೆಲ್ಲವೂ ಅಸಂಬದ್ಧ’ ಎಂದಿದ್ದಾರೆ.