August 31, 2026
Monday, August 31, 2026
spot_img

3 ಲಕ್ಷಕ್ಕೂ ಹೆಚ್ಚು ಮಂದಿಯಿಂದ ‘ಗೃಹಜ್ಯೋತಿ’ಗೆ ಗುಡ್‌ಬೈ: ಗ್ಯಾರಂಟಿ ಗೀವ್​ ಅಪ್ ನಿಂದ 500 ಕೋಟಿ ರೂ. ಉಳಿತಾಯದ ನಿರೀಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ಯಾರಂಟಿ ಕೊಟ್ಟು ಈಗ ಅವುಗಳ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಕೈಗೊಂಡಿರುವ ಗೃಹಜ್ಯೋತಿ ಗೀವ್ ಅಪ್ ಅಭಿಯಾನಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಗ್ಯಾರಂಟಿ ಗೀವ್​ ಅಪ್ ಕುರಿತು ಮಾಹಿತಿ ನೀಡಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ, ಗೃಹಜ್ಯೋತಿ ಮರುಪರಿಶೀಲನೆ ವೇಳೆ ಬರೋಬ್ಬರಿ 3 ಲಕ್ಷಕ್ಕೂ ಹೆಚ್ಚು ಸ್ವ ಇಚ್ಛೆಯಿಂದ ಉಚಿತ ವಿದ್ಯುತ್ ಸೌಲಭ್ಯ ಬಿಟ್ಟುಕೊಟ್ಟಿರುವುದಾಗಿ ಹೇಳಿದ್ದಾರೆ. ಜೊತೆಗೆ ಗೃಹಜ್ಯೋತಿ ಪರಿಷ್ಕರಣೆಗೆ ಇನ್ನೂ ಒಂದು ತಿಂಗಳು ಗಡುವು ವಿಸ್ತರಣೆ ಮಾಡಲು ಇಂಧನ ಇಲಾಖೆ ಆದೇಶ ಹೊರಡಿಸಿದೆ.

500 ಕೋಟಿ ರೂ. ಉಳಿತಾಯ

ಜನರು ಸ್ವಯಂ ಪ್ರೇರಿತರಾಗಿ ಈ ಯೋಜನೆಯನ್ನು ಬಿಟ್ಟುಕೊಟ್ಟಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಅಂದಾಜು 42 ಕೋಟಿ ರೂ. ಮಾಸಿಕ ಉಳಿತಾಯವಾಗುವ ನಿರೀಕ್ಷೆಯಿದೆ. ವಾರ್ಷಿಕವಾಗಿ ಸುಮಾರು 500 ಕೋಟಿ ರೂ ಆರ್ಥಿಕ ಉಳಿತಾಯವಾಗಲಿದೆ ಎನ್ನುವ ನಿರೀಕ್ಷೆ ಇದೆ.

ಗೃಹಲಕ್ಷ್ಮಿ ಗೀವ್​ ಅಪ್ ಗೂ ಅವಕಾಶ

ಸರ್ಕಾರದ ಮತ್ತೊಂದು ಗ್ಯಾರಂಟಿ ಗೃಹಲಕ್ಷ್ಮಿ ಕುರಿತು ಮತ್ತೊಂದು ಮಹತ್ವದ ಮಾಹಿತಿ ಹೊರಬಂದಿದ್ದು, ಈ ಉಚಿತ ಯೋಜನೆಯಲ್ಲೂ ಮಹಿಳೆಯರು ಸ್ವಯಂಪ್ರೇರಣೆಯಿಂದ ಪ್ರತಿ ತಿಂಗಳ 2,000 ರೂ ಗೃಹಲಕ್ಷ್ಮಿ ಸೌಲಭ್ಯವನ್ನು ತ್ಯಜಿಸಲು ಅವಕಾಶ ಕಲ್ಪಿಸಲಾಗಿದೆ.

ಇನ್ನು ಗೃಹಲಕ್ಷ್ಮಿ ಮರು ಪರಿಶೀಲನೆ ಕಾರ್ಯ ಶುರುವಾಗಿದ್ದು, ಮನೆ ಬಾಗಿಲಿಗೆ ಬರುವ ಅಧಿಕಾರಿಗಳಿಗೆ ಅಗತ್ಯ ಮಾಹಿತಿಗಳನ್ನು ನೀಡಬೇಕು. ಒಂದು ವೇಳೆ ಸರಿಯಾದ ಮಾಹಿತಿ ನೀಡದಿದ್ದಲ್ಲಿ ಗೃಹಲಕ್ಷ್ಮಿ ಯೋಜನೆಯಿಂದ ಫಲಾನುಭವಿ ಹೆಸರು ಡಿಲೀಟ್ ಆಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !