July 23, 2026
Thursday, July 23, 2026
spot_img

ಹೊಸ ಮನೆ ಕಟ್ಟಿದ ಖುಷಿಯಲ್ಲಿ ಭರ್ಜರಿ ಊಟ: ಫುಡ್ ಪಾಯಿಸನ್ ಆಗಿ 40ಕ್ಕೂ ಅಧಿಕ ಮಂದಿ ಅಸ್ವಸ್ಥ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹೊಸ ಮನೆಯ ಮೇಲ್ಛಾವಣಿ ಕೆಲಸ ಪೂರ್ಣಗೊಂಡ ಖುಷಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭರ್ಜರಿ ಊಟ ಸವಿದ 40ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಜಾಂತಿ ಗ್ರಾಮದಲ್ಲಿ ನಡೆದಿದೆ.

ರಾಜಕುಮಾರ್ ಎಂಬುವವರು ತಮ್ಮ ಹೊಸ ಮನೆಯ ಮೇಲ್ಛಾವಣಿ ಕೆಲಸ ಪೂರ್ಣಗೊಂಡ ಖುಷಿಯಲ್ಲಿ ಗ್ರಾಮಸ್ಥರಿಗೆ ಹುಗ್ಗಿ, ಅನ್ನ, ಸಾಂಬಾರ್ ಮಾಡಿಸಿ ಊಟ ಹಾಕಿಸಿದ್ದರು. ಈ ಊಟವನ್ನು ಸೇವಿಸಿದ ಗ್ರಾಮಸ್ಥರಿಗೆ ಬೆಳಗಿನ ಜಾವ ಫುಡ್ ಪಾಯಿಸನ್ ಆಗಿ ವಾಂತಿ, ಭೇದಿ ಶುರುವಾಗಿದ್ದು, 40ಕ್ಕೂ ಅಧಿಕ ಜನರು ಅಸ್ವಸ್ಥರಾಗಿದ್ದು, 5 ರಿಂದ 6 ಜನರ ಸ್ಥಿತಿ ಗಂಭೀರವಾಗಿದೆ.

10 ರಿಂದ 15 ಜನರಿಗೆ ಬ್ರಿಮ್ಸ್‌ನ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಜನರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮನೆಯ ಮಾಲೀಕರಾದ ರಾಜಕುಮಾರ್, ಸಂಗೀತಾ, ಈರಮ್ಮ, ಶಿವಾನಂದ್ ಮತ್ತು ಅಂಬಿಕಾ ಸೇರಿದಂತೆ ಹಲವರ ಸ್ಥಿತಿ ಕೂಡ ಗಂಭೀರವಾಗಿದ್ದು,ವೈದ್ಯಕೀಯ ಮೂಲಗಳು ತಿಳಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !