ಬಿಹಾರದ ಜೈಲುಗಳು ಕುಡುಕರಿಂದ ಭರ್ತಿ! ಪಾನ ನಿಷೇಧ ಕಾಯ್ದೆಯಡಿ 73,000 ಮದ್ಯಪ್ರಿಯರು ಅಂದರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್ 
ಬಿಹಾರ ಮುಖ್ಯಮಂತ್ರಿ ಮುಖ್ಯಮಂತ್ರಿ ನಿತಿಶ್‌ಕುಮಾರ್‌ ಅವರು ಬಿಹಾರದಲ್ಲಿ ಸಂಪೂರ್ಣ ಪಾನ ನಿಷೇಧ ಜಾರಿಗೆ ತಂದಿದ್ದಾರೆ. ಆದರೆ ಕುಡುಕರು ಮಾತ್ರ ಈ ನಿಷೇಧಕ್ಕೆಲ್ಲ ಕ್ಯಾರೆ ಏನ್ನುತ್ತಿಲ್ಲ. ಕದ್ದುಮುಚ್ಚಿ ಕುಡಿಯುವುದು, ಕಾಯ್ದೆಯನ್ನು ಉಲ್ಲಂಘಿಸುವ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಅಲ್ಲಿನ ಜೈಲುಗಳು ಭರ್ತಿಯಾಗುತ್ತಿದೆ. ರಾಜ್ಯ ಪೊಲೀಸರು ಮತ್ತು ಮದ್ಯ ವಿರೋಧಿ ಕಾರ್ಯಪಡೆ (ಎಎಲ್‌ಟಿಎಫ್) ಕಳೆದ 7 ತಿಂಗಳಲ್ಲಿ 73,000 ಕ್ಕೂ ಹೆಚ್ಚು ಅಪರಾಧಿಗಳನ್ನು ಬಂಧಿಸಿರುವುದಾಗಿ ಹೇಳಿಕೊಂಡಿದೆ.
ನಮ್ಮ ಇಲಾಖೆಯು 40,000 ಕ್ಕೂ ಹೆಚ್ಚು ಜನರನ್ನು ಬಂಧಿಸಿದೆ ಮತ್ತು ಉಳಿದವರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ ಎಂದು ಎಲ್‌ಟಿಎಫ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಏಪ್ರಿಲ್ 2016 ರಿಂದ ಮದ್ಯ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಕಳೆದ ಏಳು ತಿಂಗಳ ಅವಧಿಯಲ್ಲಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 52,770 ಎಫ್‌ಐಆರ್‌ಗಳು ದಾಖಲಾಗಿವೆ.  ಅಂಕಿಅಂಶಗಳ ಪ್ರಕಾರ, 2018 ರಲ್ಲಿ 4,012, 2019 ರಲ್ಲಿ 4,313,  2020 ರಲ್ಲಿ 3,802 ಮತ್ತು 2021 ರಲ್ಲಿ 5,522 ಅಪರಾಧಿಗಳನ್ನು ಬಂಧಿಸಲಾಗಿದೆ. ಜನವರಿಯಲ್ಲಿ 4,357, ಫೆಬ್ರವರಿಯಲ್ಲಿ 4,118, ಮಾರ್ಚ್‌ನಲ್ಲಿ 5,422, ಏಪ್ರಿಲ್‌ನಲ್ಲಿ 4,490, ಮೇನಲ್ಲಿ 6,255, ಜೂನ್‌ನಲ್ಲಿ 6,992 ಮತ್ತು ಜುಲೈನಲ್ಲಿ 8,440 ಅಪರಾಧಿಗಳನ್ನು ಜೈಲಿಗೆ ಅಟ್ಟಲಾಗಿದೆ.
“ನಾವು ಬಿಹಾರದ ಎಲ್ಲಾ 38 ಜಿಲ್ಲೆಗಳಲ್ಲಿ 233 ತಂಡಗಳನ್ನು ಹೊಂದಿದ್ದೇವೆ, ಜಿಲ್ಲಾ ಪೊಲೀಸರ ಸಹಯೋಗದೊಂದಿಗೆ ಹಗಲಿರುಳು ಕೆಲಸ ಮಾಡುತ್ತಿದ್ದೇವೆ” ಎಂದು ಅಧಿಕಾರಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!