April 10, 2026
Friday, April 10, 2026
spot_img

HEALTH | ಅತಿಯಾಗಿ ತಿನ್ನೋದು ಕೂಡ ಅಡಿಕ್ಷನ್‌! ಅಡಿಕ್ಟ್‌ ಆಗಿದಿರಾ ಅಂತ ಗೊತ್ತಾಗೋದು ಹೇಗೆ?

ನಾನು ಫುಡ್ಡಿ, ನಂಗೆ ಊಟ ತಿಂಡಿ ಇಷ್ಟ ಅನ್ನೋದು ಬೇರೆ. ಸದಾ ತಿನ್ನುವುದರ ಬಗ್ಗೆಯೇ ಯೋಚಿಸೋದು, ಹಸಿವಾಗದಿದ್ದರೂ ತಿನ್ನೋದು, ಹಸಿವಾಗದಿದ್ದರೂ ಟೈಮ್‌ಗೆ ಊಟ ಸಿಕ್ಕಿಲ್ಲ ಎಂದು ಕಿರಿಕಿರಿ ಮಾಡಿಕೊಳ್ಳೋದು ಎಲ್ಲ ನಾರ್ಮಲ್‌ ಅಲ್ಲ. ನಿಮಗೆ ಊಟದ ಬಗ್ಗೆ ಅಡಿಕ್ಷನ್‌ ಅನ್ನೋದು ತಿಳ್ಕೊಳೋದು ಹೇಗೆ?

ಊಟ ತಿಂಡಿ ಮೇಲೆ ಕಂಟ್ರೋಲ್‌ ಇರೋದಿಲ್ಲ, ಕುತ್ತಿಗೆಗೆ ಬಂದರೂ ಇನ್ನೊಂದು ತಿಂದುಬಿಡೋಣ ಎನಿಸುತ್ತದೆ.

ಅತಿಯಾಗಿ ತಿಂದು ಗಿಲ್ಟ್‌ ಮಾಡಿಕೊಳ್ಳೋದು ಕೂಡ ಫುಡ್‌ ಅಡಿಕ್ಷನ್‌ ಲಕ್ಷಣವಾಗಿದೆ.

ಅತಿಯಾದ ಕ್ರೇವಿಂಗ್ಸ್‌, ದಿನದ ಮೂರು ಹೊತ್ತೂ ಇದನ್ನೇ ತಿನ್ನಬೇಕು ಎಂದು ಫಿಕ್ಸ್‌ ಆಗೋದು.

ಊಟ ತಿಂಡಿ ಸಮಯದಲ್ಲಿ ಸ್ವಲ್ಪ ವ್ಯತ್ಯಾಸ ಆದರೂ ತಲೆ ನೋವು.

ಊಟ ತಿಂಡಿ ಸಮಯದಲ್ಲಿ ಸ್ವಲ್ಪ ವ್ಯತ್ಯಾಸ ಆದರೂ ಇರಿಟೇಷನ್‌. ಇಲ್ಲಸಲ್ಲದ ಕಾರಣ ಹುಡುಕಿ ಕಿರಿಕಿರಿ ಮಾಡೋದು. ಹೊಟ್ಟೆ ತುಂಬುವವರೆಗೂ ಸಮಾಧಾನವೇ ಇಲ್ಲದಂತಿರುವುದು.

ಇದರಿಂದ ಹೊರಬರೋದು ಹೇಗೆ?

ಮೊದಲು ದೇಹವನ್ನು ಡೀಟಾಕ್ಸಿಫೈ ಮಾಡಬೇಕು. ನಿಮ್ಮ ಇಷ್ಟದ ಆಹಾರ, ಜಂಕ್‌ ಫುಡ್‌, ಸಿಹಿ ತಿಂಡಿಯನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಇದು ಇಷ್ಟವಾಗದೇ ಇರಬಹುದು, ಹಿಂಸೆ ಆಗಬಹುದು. ಬಟ್‌ ಮಾಡಬೇಕು.

ಊಟ ತಿಂಡಿ ತಿನ್ನುವ ಜಾಗ ಕೂಲ್‌ ಆಗಿರಲಿ. ಬಫೆ ಇರುವ ಜಾಗಕ್ಕೆ ಹೋಗಬೇಡಿ.

ರಾತ್ರಿ ಮಲಗುವ ಮುನ್ನ ಆಗುವ ಕ್ರೇವಿಂಗ್ಸ್‌, ಮಧ್ಯರಾತ್ರಿ ಆಗುವ ಹಸಿವಿಗೆ ಬ್ರೇಕ್‌ ಹಾಕಿ.

ಕ್ಯಾಲೋರಿಗಳ ಬಗ್ಗೆ, ಊಟ ತಿಂಡಿಯ ಸಮತೋಲನದ ಬಗ್ಗೆ ತಿಳಿದುಕೊಳ್ಳಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !