ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯಪುರದಲ್ಲಿ ದಾಖಲೆಯ ಬೆಲೆಗೆ ಎತ್ತು ಮಾರಾಟವಾಗಿದೆ, ಒಂದು ಎತ್ತಿಗೆ ಬರೋಬ್ಬರಿ 18 ಲಕ್ಷ ರೂಪಾಯಿ..
ಹೌದು, ಒಂದೇ ಎತ್ತು ಬರೋಬ್ಬರಿ 18 ಲಕ್ಷ 1 ಸಾವಿರಕ್ಕೆ ಮಾರಾಟವಾಗಿದೆ. ಜಾನುವಾರು ಮಾರಾಟದ ವಿಚಾರದಲ್ಲಿ ದಾಖಲೆ ಮೊತ್ತಕ್ಕೆ ಮಾರಾಟವಾದ ಎತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದ ರಾಮನಗೌಡ ಪಾಟೀಲ್ ಎಂಬುವರರ ಎತ್ತನ್ನು ಬರೋಬ್ಬರಿ 18 ಲಕ್ಷ 1 ಸಾವಿರ ಕೊಟ್ಟು ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಹಿಟ್ನಾಳ ಗ್ರಾಮದ ಸದಾಶಿವ ಡಾಂಗೆ ಎಂಬುವರು ಖರೀದಿ ಮಾಡಿದ್ದಾರೆ.
ತೆರ ಬಂಡಿ ಎಳೆಯುವುದರಲ್ಲಿ ಈ ಎತ್ತು ಪ್ರಸಿದ್ದಿಯಾಗಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ತೆರಬಂಡಿ ಸ್ಪರ್ಧೆಯಲ್ಲಿ ಈ ಎತ್ತು ಹಲಾವರು ಬಹುಮಾನಗಳನ್ನು ಗೆದ್ದಿದೆ. ಐದುವರೆ ಅಡಿ ಎತ್ತರವಿರೋ ಈ ಎತ್ತು ಇಲ್ಲಿವರೆಗೆ 40 ಗ್ರಾಂ ಚಿನ್ನ, ಎರಡು ಬೆಳ್ಳಿ ಗದೆ, 4 ಬೈಕ್ ಅನ್ನು ಗೆದ್ದಿದೆ. ನಿತ್ಯ ಈ ಎತ್ತಿಗೆ ಮನೆಯವರು ಪೌಷ್ಟಿಕಾಂಶ ಆಹಾರ ನೀಡುತ್ತಿದ್ದರು ಎಂದು ಹೇಳಲಾಗಿದೆ.