ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ಕಡೆ ಬಿಜೆಪಿಯ ರೆಬೆಲ್ ನಾಯಕರು ದೆಹಲಿಗೆ ಹೋದರೆ ಇನ್ನೊಂದು ಕಡೆ ಆಪ್ತರ ಮೂಲಕ ಇನ್ನುಳಿದವರ ಮನವೊಲಿಸುವ ಕೆಲಸ ಆಗುತ್ತಿದೆ. ಈ ಸಂದರ್ಭದಲ್ಲಿ ಗದಗದಲ್ಲಿ ಬಿ.ಶ್ರೀರಾಮುಲು ಹಾಗೂ ಪಿ.ರಾಜೀವ್ ಮೀಟಿಂಗ್ ಮಾಡಿದ್ದಾರೆ.
ನಗರದ ಹೊಸ ಬಸ್ ನಿಲ್ದಾಣ ಬಳಿ ಇರುವ ಶ್ರೀರಾಮುಲು ಮನೆಗೆ ಪಿ.ರಾಜೀವ್ ಬಂದಿದ್ದು, ಉಭಯ ನಾಯಕರ ಗುಪ್ತ ಮೀಟಿಂಗ್ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ.
ಪಿ.ರಾಜೀವ್ ಮಾಜಿ ಶಾಸಕ ಹಾಗೂ ಬಿಜೆಪಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅಷ್ಟೇ ಅಲ್ಲದೇ ಪಿ.ರಾಜೀವ್ ವಿಜಯೇಂದ್ರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.