ಅಭಿವೃದ್ಧಿ ಕೆಲಸ ಮಾಡಿದ್ದಕ್ಕೆ ಪಾದಯಾತ್ರೆ, ವೈಫಲ್ಯತೆ ಮುಚ್ಚಿಕೊಳ್ಳಲು ಅಲ್ಲ: ಶಾಸಕ ಆನಂದ ನ್ಯಾಮಗೌಡರ ತಿರುಗೇಟು

ಹೊಸ ದಿಗಂತ ವರದಿ , ಬಾಗಲಕೋಟೆ:

ಜಮಖಂಡಿ ಕ್ಷೇತ್ರದ ಜನರ ಆಶೀರ್ವಾದ ದಿಂದ ಮೊದಲ ಬಾರಿ ಶಾಸಕನಾಗಿ ನಾಲ್ಕು ವರ್ಷದಲ್ಲಿ ನನ್ನ ಕ್ಷೇತ್ರದ ಜನರಿಗೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ತೆರೆದಿಡಲು ಕ್ಷೇತ್ರದಲ್ಲಿ ಪಾದಯಾತ್ರೆ ಕೈಗೊಂಡಿದ್ದೇನೆ. ಧಮ್, ತಾಕತ್ತು, ಧೈರ್ಯದಿಂದಲೇ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನನ್ನ ವೈಫಲ್ಯತೆ ಮುಚ್ಚಿಕೊಳ್ಳಲು ಅಲ್ಲ ಎಂದು ವಿರೋಧ ಪಕ್ಷದ ನಾಯಕರ ಹೇಳಿಕೆಗೆ ಜಮಖಂಡಿ ಮತಕ್ಷೇತ್ರದ ಶಾಸಕ ಆನಂದ ನ್ಯಾಮಗೌಡರ ಖಡಕ್ ತಿರುಗೇಟು ನೀಡಿದರು.

ಜಮಖಂಡಿ ವಿಧಾನಸಭೆ ಮತಕ್ಷೇತ್ರದ ಸಾವಳಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆಯ ಸಾರ್ವಜನಿಕ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಕ್ಷೇತ್ರದಲ್ಲಿ ಹಾಗೂ ಸಾವಳಗಿ ಗ್ರಾಮಕ್ಕೆ ನನ್ನ ಅವಧಿಯಲ್ಲಿ ಮಾಡಿದಂತಹ ಅಭಿವೃದ್ಧಿ ಕೆಲಸಗಳ ಸಾಧನೆಯನ್ನು ಜನರಿಗೆ ಮನದಟ್ಟು ಮಾಡಿದರು. ಸಾವಳಗಿ ಗ್ರಾಮಕ್ಕೆ ನನ್ನ ಅವಧಿಯಲ್ಲಿ 50 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿ ಮಾಡಿದ್ದೇನೆ ಎಂದು ವರದಿಯನ್ನು ಒಪ್ಪಿಸಿದರು.

ಜಮಖಂಡಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು ನಾನು ಮಾಡುತ್ತಿರುವ ಯಾತ್ರೆಗೆ ಹೆಜ್ಜೆ ಹೆಜ್ಜೆ ಹಾಕಿ ಪ್ರಯಾಣ ಮಾಡುತ್ತಿದ್ದಾರೆ ಎಂದರು.

ನನ್ನ ಅವಧಿಯಲ್ಲಿ ಮಾಡಿದಂತಹ ಕೆಲಸಕ್ಕೆ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದುಕೊಂಡಿಲ್ಲ. ಆದರೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತುವ ಮೂಲಕ ಹಾಗೂ ಸಚಿವರ ಗಮನಸೆಳೆಯುವ ಮೂಲಕ ನಮ್ಮ ಕ್ಷೇತ್ರದ ಅಭಿವೃದ್ದಿ ಕೆಲಸದ ಬೇಡಿಕೆಯನ್ನು ಈಡೇರಿಸಿಕೊಂಡಿದ್ದೇವೆ. ಸರ್ಕಾ ರದಲ್ಲಿ ಅನುದಾನ ನೀಡವಲ್ಲಿ ತಾರತಮ್ಯವಾಗುತ್ತದೆ. ಆಡಳಿತ ಪಕ್ಷದ ಶಾಸಕರಿಗೆ ಹೆಚ್ಚು ಅನುದಾನ, ವಿರೋಧ ಪಕ್ಷದ ಶಾಸಕರಿಗೆ ಅನುದಾನ ಕಡಿಮೆ ಸಿಗುತ್ತದೆ. ವಿರೋಧ ಪಕ್ಷದ ಶಾಸಕನಾಗಿಯೂ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ನನ್ನ ಕ್ಷೇತ್ರದ ಜನರಿಗೆ ಮಾಡಿದ್ದೇನೆ ಎಂಬ ಸಂತೋಷ ನನ್ನಲ್ಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!