ಹೊಸದಿಗಂತ ವರದಿ ಜೋಯಿಡಾ:
ಜೋಯಿಡಾ ತಾಲೂಕಿನ ಸಿಂಗರಗಾವದಲ್ಲಿ ಭಾರೀ ಮಳೆಯಿಂದಾಗಿ ಭತ್ತದ ಗದ್ದೆಯಲ್ಲಿ ನೀರು ತುಂಬಿದ್ದು, ನಾಟಿ ಮಾಡಿದ ಭತ್ತದ ಪೈರು ಸಂಪೂರ್ಣ ಜಲಾವೃತವಾಗಿವೆ.
ಕಳೆದ 4 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಿಂಗರಗಾವ ಬಳಿ 25 ಎಕರೆಗೂ ಹೆಚ್ಚಿನ ನಾಟಿ ಮಾಡಿದ ಭತ್ತದ ಗದ್ದೆ ನೀರುಪಾಲಾಗಿದ್ದು, ಕೃಷಿಯನ್ನೇ ನಂಬಿದ್ದ ರೈತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಮಳೆ ಹಾನಿ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಬಂದು ಸ್ಥಳ ಪರಿಶೀಲಿಸಿ, ಸರ್ಕಾರ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಜೋಯಿಡಾ ತಾಲೂಕಿನಲ್ಲಿ ಸದ್ಯ ಹೆಚ್ಚಿನ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು ಕ್ಯಾಸಲರಾಕ್ ಭಾಗದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ.