ಹೊಸದಿಗಂತ ಡಿಜಿಟಲ್ ಡೆಸ್ಕ್:
ಪದ್ಮಶ್ರೀ ಪ್ರಶಸ್ತಿ ವಿಜೇತ ಕೃಷಿ ಕ್ಷೇತ್ರದ ಅಪ್ರತಿಮ ಸಾಧಕ ಅಮೈ ಮಹಾಲಿಂಗ ನಾಯ್ಕ್ ಅವರನ್ನು ಕಾಸರಗೋಡು ಭಾರತೀಯ ವೈದ್ಯಕೀಯ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಕಾಸರಗೋಡು ಶಾಖೆ ವತಿಯಿಂದ ಅವರ ನಿವಾಸದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಐಎಂಎ ಅಧ್ಯಕ್ಷ ಡಾ. ಬಿ. ನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಜನಾರ್ದನ ನಾಯ್ಕ, ಡಾ. ಕೃಷ್ಣಾನಾಯ್ಕ್, ಡಾ. ಜ್ಯೋತಿ. ಎಸ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭ ಅಮೈ ಅವರಿಗೆ ಸ್ಪ್ರೇಯರ್, ತೆಂಗಿನಮರಕ್ಕೆ ಹತ್ತುವ ಯಂತ್ರ ಹಾಗೂ ಕೃಷಿ ಬಳಕೆಯ ಕೈಕೋಳ, ಸಿಹಿ ಮತ್ತು ಹಣ್ಣುಹಂಪಲುಗಳನ್ನು ಉಡುಗೊರೆಯಾಗಿ ನೀಡಲಾಯಿತು.