ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್‌ನಲ್ಲಿ ಟೂರಿಸ್ಟ್‌ಗಳ ಮೇಲೆ ನಡೆಸಿದ ಭೀಕರ ಭಯೋತ್ಪಾದಕ ದಾಳಿಯಲ್ಲಿ 27 ಮಂದಿ ಮೃತಪಟ್ಟಿದ್ದಾರೆ. ದಾಳಿಯಲ್ಲಿ ಕನ್ನಡಿಗರಿಬ್ಬರು ಮೃತಪಟ್ಟಿದ್ದು, ಮೃತರ ದೇಹಗಳು ಇಂದು ಬೆಂಗಳೂರಿಗೆ ಆಗಮಿಸಲಿದೆ.
ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥ್ ರಾವ್ ಮೃತದೇಹ ಬುಧವಾರ ಸಂಜೆ ರಾಜ್ಯಕ್ಕೆ ಆಗಮಿಸಲಿದೆ. ಮಂಜುನಾಥ್ ರಾವ್ ಅವರ ಮೃತದೇಹ ಸಂಜೆ 6 ಗಂಟೆಗೆ ರಾಜ್ಯಕ್ಕೆ 6E 3103/ 6E 5269/ 6E 7731 ವಿಮಾನದ ಮೂಲಕ ತಲುಪಲಿದೆ.
ಉಗ್ರರ ಗುಂಡೇಟಿಗೆ ಬಲಿಯಾದ ಮತ್ತೋರ್ವ ಕರ್ನಾಟಕದ ನಿವಾಸಿ ಭರತ್ ಭೂಷಣ್ ಮೃತದೇಹವೂ, 6E 3105/ 6E 5252 ವಿಮಾನದಲ್ಲಿ ಮಧ್ಯಾಹ್ಮ 3 ಗಂಟೆಗೆ ಮುಂಬೈ ಮೂಲಕ ಬೆಂಗಳೂರಿಗೆ ತಲುಪಲಿದೆ.
ದಾಳಿಯಲ್ಲಿ ಮೃತಪಟ್ಟ ಮಧುಸೂದನ್ ರಾವ್ ಅವರು ಮೂಲತಃ ಅಂಧ್ರದವರಾಗಿದ್ದು ರಾಮಮೂರ್ತಿ ನಗರದಲ್ಲಿ ನೆಲೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ ಮೃತದೇಹ ಮಧ್ಯಾಹ್ಮ 3 ಗಂಟೆಗೆ 6E 3105/ 6E 5015 ವಿಮಾನದಲ್ಲಿ ಮುಂಬೈ ಮೂಲಕ ಚೆನೈ ತಲುಪಲಿದೆ.