ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಹಿಂದೂಗಳ ನರಮೇಧ ಮಾಡಿದ ಕೃತ್ಯದ ಮಾಸ್ಟರ್ ಮೈಂಡ್ ಸೈಫುಲ್ಲಾ ಖಾಲಿದ್ ಪಾಕಿಸ್ತಾನದ ರ‍್ಯಾಲಿಯೊಂದರಲ್ಲಿ ಹಿರಿಯ ರಾಜಕಾರಣಿಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದಾನೆ. ಜೊತೆಗೆ ವೇದಿಕೆ ಭಾಷಣದಲ್ಲಿ ಭಾರತದ ವಿರುದ್ಧ ಮತ್ತೆ ವಿಷಕಾರಿರುವುದು ಕಂಡುಬಂದಿದೆ.
ಲಷ್ಕರ್-ಎ-ತೈಬಾ ಉಪ ಮುಖ್ಯಸ್ಥನಾಗಿರುವ ಸೈಫುಲ್ಲಾ ಖಾಲಿದ್ ಮುಂಬೈ ದಾಳಿ ಸೂತ್ರಧಾರ ಹಫೀಜ್ ಸಯೀದ್‌ನ ಆಪ್ತನೂ ಕೂಡ ಆಗಿದ್ದಾನೆ. ಪಾಕಿಸ್ತಾನದ ಪಂಜಾಬ್‌ನಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ರಾಜಕಾರಣಿ ಮಲಿಕ್ ಅಹ್ಮದ್ ಖಾನ್ ಜೊತೆಗೆ ವೇದಿಕೆ ಹಂಚಿಕೊಂಡಿರುವುದು ಕಂಡುಬಂದಿದೆ. ಅಲ್ಲದೇ ಪಾಕ್ ಸೇನೆಯಿಂದಲೇ ಅವನಿಗೆ ರಕ್ಷಣೆ ನೀಡಲಾಗಿದೆ. ಇದೇ ವೇದಿಕೆಯಲ್ಲಿ ಎಲ್‌ಇಟಿ ಸ್ಥಾಪಕ ಮತ್ತು ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಅವರ ಪುತ್ರ ತಲ್ಹಾ ಸಯೀದ್ ಕೂಡ ಇದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.