ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್‌ ಸಯೀದ್‌ಗೆ ಪಾಕ್‌ ಆರ್ಮಿಯಿಂದ 24*7 ಸೆಕ್ಯುರಿಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಭಾರತದ ಮೋಸ್ಟ್ ವಾಟೆಂಡ್ ಉಗ್ರ ಹಫೀಜ್ ಸಯೀದ್ ಪಾಕಿಸ್ತಾನದ ಭದ್ರತೆಯಲ್ಲಿರೋ ಅಂಶ ಇದೀಗ ಬಯಲಾಗಿದೆ. ಪಾಕ್‌ ಆರ್ಮಿಯಿಂದ ಸೆಕ್ಯುರಿಟಿ ಪಡೆದು ಉಗ್ರ ಐಷಾರಾಮಿ ಜೀವನ ನಡೆಸುತ್ತಿದ್ದಾನೆ ಎಂದು ಮಾಧ್ಯಮವೊಂದು ರಿಪೋರ್ಟ್‌ ಮಾಡಿದೆ.

ಪಹಲ್ಗಾಮ್ ಹತ್ಯಾಕಾಂಡದ ಕಿಂಗ್ ಪಿನ್ ಮಾಸ್ಟರ್ ಮೈಂಡ್ ರಕ್ಕಸ ಹಫೀಜ್ ಸಯೀದ್ ಪಾಕಿಸ್ತಾನದಲ್ಲಿ ಸೇಫ್‌ ಆಗಿದ್ದಾನೆ ಅನ್ನೋದು ವಿಡಿಯೋ ಸಮೇತ ಬಹಿರಂಗವಾಗಿದೆ.

ಪಾಕಿಸ್ತಾನದ ಲಾಹೋರ್‌ ನಗರದಲ್ಲಿ 24*7 ಟೈಟ್ ಸೆಕ್ಯೂರಿಟಿಯಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದೆ. ಜನರ ಮಧ್ಯೆ ಖಾಸಗಿ ಪಾರ್ಕ್, ಮದರಸ ಹೊಂದಿರುವ ದೊಡ್ಡ ಕಟ್ಟಡದಲ್ಲಿ ಜೀವನ ನಡೆಸುತ್ತಿದ್ದಾನೆ. ಈತ ವಾಸಿಸುತ್ತಿರುವ ಜಾಗದ ಉಪಗ್ರಹ ಇಮೇಜ್‌, ವಿಡಿಯೋ ಈಗ ಲಭ್ಯ ವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!