ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಗಾಯಕಿ ಶ್ರೇಯಾ ಘೋಷಾಲ್ ತಮ್ಮ ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಿದರು.
ಶ್ರೇಯಾ ಘೋಷಾಲ್, ತಮ್ಮ “ಆಲ್ ಹಾರ್ಟ್ಸ್ ಟೂರ್”ನ ಭಾಗವಾಗಿ ಶನಿವಾರ ಸೂರತ್‌ನಲ್ಲಿ ಪ್ರದರ್ಶನ ನೀಡಬೇಕಿತ್ತು. ಆದರೆ ಪಹಲ್ಗಾಮ್ ದಾಳಿ ಹಿನ್ನೆಲೆ ಕಾರ್ಯಕ್ರಮ ನಡೆಯಲಿಲ್ಲ.
ಇದಕ್ಕೂ ಮೊದಲು, ಜನಪ್ರಿಯ ಗಾಯಕ ಅರಿಜಿತ್ ಸಿಂಗ್ ಅವರು ಭಾನುವಾರದಂದು ನಿಗದಿಯಾಗಿದ್ದ ತಮ್ಮ ಚೆನ್ನೈ ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಿದರು. ರ‍್ಯಾಪರ್ ಎಪಿ ಧಿಲ್ಲೋನ್ ತಮ್ಮ ಮುಂಬರುವ ಮ್ಯೂಸಿಕ್ ಆಲ್ಬಮ್ ಬಿಡುಗಡೆಯನ್ನು ಮುಂದೂಡಿದ್ದಾರೆ.
ಗಾಯಕ ಪಾಪನ್ ಶನಿವಾರದಂದು ನಿಗದಿಯಾಗಿದ್ದ ಅಹಮದಾಬಾದ್ ಕಾರ್ಯಕ್ರಮವನ್ನು ರದ್ದುಗೊಳಿಸಿದರು. ಸಂಗೀತ ಸಂಯೋಜಕ ಮತ್ತು ಗಾಯಕ ಅನಿರುದ್ಧ್ ರವಿಚಂದರ್ ತಮ್ಮ ಮುಂಬರುವ ಬೆಂಗಳೂರು ಸಂಗೀತ ಕಾರ್ಯಕ್ರಮದ ಟಿಕೆಟ್ ಮಾರಾಟವನ್ನು ಮುಂದೂಡಿದ್ದಾರೆ.