ಹೊಸದಿಗಂತ ಡಿಜಿಟಲ್ ಡೆಸ್ಕ್;
ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಬಲಿಯಾದ ಶುಭಂ ದ್ವಿವೇದಿ ಅವರ ಹೆಸರನ್ನು ಕಾನ್ಫುರದ ಪಾರ್ಕ್ ವೊಂದಕ್ಕೆ ಇಡಲಾಗುತ್ತಿದೆ.
ಈ ಕುರಿತು ಮಾಹಿತಿ ನೀಡಿದ ನಗರ ಮೇಯರ್ ಪ್ರಮೀಳಾ ಪಾಂಡೆ, ಶ್ಯಾಮ್ ನಗರದಲ್ಲಿರುವ ಪಾರ್ಕ್ ಮತ್ತು ವೃತ್ತವೊಂದಕ್ಕೆ ಪಶುಭಂ ದ್ವಿವೇದಿ ಅವರ ಹೆಸರನ್ನು ಇಡಲಾಗುವುದು ಎಂದು ತಿಳಿಸಿದ್ದಾರೆ.
31 ವರ್ಷದ ದ್ವಿವೇದಿ ಈ ವರ್ಷ ಫೆಬ್ರವರಿ 12 ರಂದು ವಿವಾಹವಾಗಿದ್ದರು ಮತ್ತು ಪತ್ನಿ ಎದುರೇ ಅವರನ್ನು ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದರು.
ಶುಭಂ ದ್ವಿವೇದಿ ಅವರ ಪತ್ನಿ ಅಶನ್ಯಾ ಅವರು ಆಸಕ್ತಿ ವ್ಯಕ್ತಪಡಿಸಿದರೆ ಕಾನ್ಪುರ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಹೊರಗುತ್ತಿಗೆ ಕೆಲಸವನ್ನು ನೀಡಬಹುದು ಎಂದು ಅವರು ತಿಳಿಸಿದರು.