ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ಹತ್ಯಾಕಾಂಡದ (Pahalgam Terror Attack) ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿದೆ. ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಾ , ಮೋದಿ ಸೇರಿದಂತೆ ಪಹಲ್ಗಾಮ್ ದಾಳಿಗೆ ಕಾರಣರಾದವರು ರಾಜೀನಾಮೆ ನೀಡಲು ಆಗ್ರಹಿಸಿದ್ದಾರೆ.
ಪಹಲ್ಗಾಮ್ ಉಗ್ರ ದಾಳಿ ಭದ್ರತಾ ಲೋಪದ ಪರಿಣಾಮ . ಸರ್ಕಾರ ಈ ದಾಳಿಯ ಹೊಣೆ ಹೊರಬೇಕು. ಭೀಕರ ದಾಳಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಮೋದಿ ಸದನದಲ್ಲಿದ್ದ ಇಲ್ಲದ ಕಾರಣ, ಪಹಲ್ಗಾಮ್ ದಾಳಿ ಪ್ರಶ್ನೆಗಳನ್ನು ಎದುರಿಸಲು ಸಾಧ್ಯವಿಲ್ಲದಿದ್ದರೆ, ಸ್ಥಾನಕ್ಕೆ ಅರ್ಹರಲ್ಲ ಎಂದು ಖರ್ಗೆ ಹೇಳಿದ್ದಾರೆ.
ಪ್ರವಾಸಿಗರು ಭೇಟಿ ನೀಡುವ ಸ್ಥಳದಲ್ಲಿ ಭದ್ರತೆಯೂ ಇರಲಿಲ್ಲ. ಉಗ್ರರುಪಹಲ್ಗಾಮ್ ವರೆಗೆ ಯಾವುದೇ ಅಡೆ ತಡೆ ಇಲ್ಲದೆ ಆಗಮಿಸಿದ್ದಾರೆ. ಇವೆಲ್ಲಾ ಭದ್ರತಾ ಲೋಪದ ಪರಿಣಾಮಗಳು ಎಂದು ಖರ್ಗೆ ಆರೋಪಿಸಿದ್ದಾರೆ.
ಅತ್ತ ಭಾರತ ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದ ಡೋನಾಲ್ಡ್ ಟ್ರಂಪ್ ಎಂದು ಹೇಳುತ್ತಿದ್ದಾರೆ. ಟ್ರಂಪ್ ಹಲವು ಭಾರಿ ತಮ್ಮ ಭಾಷಣದಲ್ಲಿ ಹಾಗೂ ಹಲವು ವೇದಿಕೆಗಳಲ್ಲಿ ಹೇಳಿದ್ದಾರೆ. ಒಂದು ಬಾರಿ ಅಲ್ಲ, 29 ಬಾರಿ ಟ್ರಂಪ್ ಯುದ್ಧ ನಿಲ್ಲಿಸಿರುವುದಾಗಿ ಹೇಳಿದ್ದಾರೆ. ನನ್ನ ಭಾಷಣ ಮುಗಿಯುವ ವೇಳೆಗೆ ಟ್ರಂಪ್ 30ನೇ ಬಾರಿಗೆ ಯುದ್ಧ ನಿಲ್ಲಿಸಿರುವ ಹೇಳಿಕೆ ನೀಡಬಹುದು. ಆದರೆ ಕೇಂದ್ರ ಸರ್ಕಾರ ಈ ಕುರಿತು ಸ್ಪಷ್ಟ ಹಾಗೂ ನಿಖರ ಉತ್ತರ ನೀಡಿಲ್ಲ ಎಂದು ಖರ್ಗೆ ಆರೋಪಿಸಿದ್ದಾರೆ.
ಕಾರ್ಗಿಲ್ ಯುದ್ಧದ ಕುರಿತು ಉನ್ನತ ಮಟ್ಟದ ತನಿಖೆ ನಡೆದಿದೆ. ಇದೇ ರೀತಿ ಪಹಲ್ಗಾಮ್ ಉಗ್ರ ದಾಳಿ ಕುರಿತು ತನಿಖೆಯಾಗಬೇಕು. ಕಳೆದ 11 ವರ್ಷದಲ್ಲಿ ಮೋದಿ ಒಂದೇ ಒಂದು ಚರ್ಚೆಗೆ ಸಿದ್ಧವಿಲ್ಲ. ಭಾರತೀಯ ಸೇನೆ ಈಗಾಗಲೇ ಯುದ್ಧ ವಿಮಾನ ಪತನವಾಗಿದೆ ಎಂದು ಒಪ್ಪಿಕೊಡಿದೆ. ಇದು ರಾಜಕೀಯ ನಿರ್ಧಾರದಿಂದ ಆಗಿದೆ. ಭಾರತೀಯ ಸೇನಾಧಿಕಾರಿ ಮಾತಿನ ಪ್ರಕಾರ ಪಾಕಿಸ್ತಾನ ಹಾಗೂ ಚೀನಾ ಜೊತೆ ಯುದ್ಧ ಮಾಡುತ್ತಿದ್ದೇವೆ ಎಂದಿದ್ದಾರೆ. ಆದರೆ ಮೋದಿ ಹೇಳುತ್ತಿದ್ದಾರೆ. ಚೀನಾ ಯಾವುದೇ ಪ್ರದೇಶ ಆಕ್ರಮಣ ಮಾಡಿಲ್ಲ, ಚೀನಾ ಬಂದೇ ಇಲ್ಲ ಎಂದಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.
ಪಹಲ್ಗಾಮ್ ದಾಳಿ ಬಳಿಕ ಜಂಟಿ ಅಧಿವೇಶನ ಕರೆಯುವ ಬದಲು ಪ್ರಧಾನಿ ಮೋದಿ ಸೌದಿ ಅರೇಬಿಯಾದಿಂದ ನೇರವಾಗಿ ಬಿಹಾರಕ್ಕೆ ತೆರಳಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಕೇಂದ್ರ ಸರ್ಕಾರ ಎಲ್ಲಾ ರೀತಿಯಲ್ಲೂ ವಿಫಲವಾಗಿದೆ. ಇದರ ಪರಿಣಾಮ ಅಮಾಯಕರು ಬಲಿಯಾಗಿದ್ದಾರೆ ಎಂದು ಖರ್ಗೆ ಆರೋಪಿಸಿದ್ದಾರೆ.