ಪತಿಯ ನಿಧನದ ನೋವು : ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪತಿಯ ಅಗಲುವಿಕೆಯ ನೋವಿನಿಂದ ಹೊರಬರಲಾರದೇ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಸವಣೂರು ಗ್ರಾಮದ ಪೆರಿಯಡ್ಕ ನಿವಾಸಿ ದಿ.ದಿನೇಶ್ ಪೆರಿಯಡ್ಕ ಅವರ ಪತ್ನಿ ರೂಪಾ (30 ವರ್ಷ) ಎಂದು ಗುರುತಿಸಲಾಗಿದೆ.

ಪತಿಯ ನಿಧನದ ಬಳಿಕ ತವರು ಮನೆ ಕೊಡಗು ಜಿಲ್ಲೆಯ ಪೆರಾಜೆಯ ಹೊದ್ದೆಟ್ಟಿಗೆ ಹೋಗಿದ್ದರು. ಅಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೂಪಾ ಅವರು ಮೂಲತಃ ಕೊಡಗು ಜಿಲ್ಲೆಯ ಪೆರಾಜೆಯ ಹೊದ್ದೆಟ್ಟಿಯವರು. ಎರಡು ವರ್ಷಗಳ ಹಿಂದೆ ಅವರನ್ನು ಸವಣೂರಿನ ಪೆರಿಯಡ್ಕದ ದಿನೇಶ್ ಅವರೊಂದಿಗೆ ಮದುವೆ ಮಾಡಿಮಾಡಲಾಗಿತ್ತು. ದಿನೇಶ್ ಪೆರಿಯಡ್ಕ ಅವರು ಅನಾರೋಗ್ಯದಿಂದ ಆ.7ರಂದು ನಿಧನ ಹೊಂದಿದ್ದರು.

ಇದಾದ ಬಳಿಕ ರೂಪಾ ತವರು ಮನೆ ಪೆರಾಜೆಗೆ ಬಂದಿದ್ದರು. ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚೂಡಿದಾರ ಶಾಲು ಬಳಸಿ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.

ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕರೆತರಲಾಗಿದ್ದು,ಕೊಡಗು ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!