ಕನಸು ಈಡೇರದೇ ಇದ್ದಾಗ ನೋವು ಸಹಜ: ಸೋಲಿನ ಬೆನ್ನಲೇ ಹಾರ್ದಿಕ್ ಪಾಂಡ್ಯಾ ಟ್ವೀಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ-20 ವಿಶ್ವಕಪ್​ನ ಸೆಮಿಫೈನಲ್​​ನಲ್ಲಿ ಭಾರತ ಹೀನಾಯ ಸೋಲು ಅನುಭವಿಸಿದ್ದು, ಈ ಮೂಲಕ ಟೂರ್ನಿಯಿಂದ ಹೊರನಡೆದಿದೆ.

ಇದೀಗ ತಂಡದ ಆಟಗಾರ ಹಾರ್ದಿಕ್ ಪಾಂಡ್ಯ ಭಾವನಾತ್ಮಕ ಸಂದೇಶದ ಮೂಲಕ ಟ್ವೀಟ್ ಮಾಡಿ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

‘ಕನಸು ಈಡೇರದೇ ಇದ್ದಾಗ ನೋವಾಗುವುದು ಸಹಜ. ನಮ್ಮೆಲ್ಲರ ಕನಸು ಧ್ವಂಸವಾದಂತಾಗಿದೆ. ಈವರೆಗೂ ನಾವೆಲ್ಲರೂ ಒಂದು ತಂಡವಾಗಿ ಆಡಿದ್ದೇವೆ. ಇದನ್ನು ನಾನು ಆನಂದಿಸಿದ್ದೇನೆ. ಸೆಮಿಫೈನಲ್​ವರೆಗೂ ಪ್ರತೀ ಹಂತದಲ್ಲೂ ಕಠಿಣ ಪರಿಶ್ರಮದೊಂದಿಗೆ ಪರಸ್ಪರ ಹೋರಾಡಿದ್ದೇವೆ. ತಿಂಗಳುಗಳಿಂದ ನಮ್ಮನ್ನು ಬೆಂಬಲಿಸಿದವರಿಗೆ ಹಾಗೂ ನಮ್ಮ ಸಿಬ್ಬಂದಿ ವರ್ಗಕ್ಕೆ ಧನ್ಯವಾದಗಳು’ ಎಂದು ಟ್ವೀಟ್ ಮಾಡಿದ್ದಾರೆ.

ಹಾರ್ದಿಕ್ ಪಾಂಡ್ಯಾ ಟಿ-20 ವಿಶ್ವಕಪ್ ಪಂದ್ಯದುದ್ದಕ್ಕೂ ಉತ್ತಮ ಫಾರ್ಮ್ ನಲ್ಲಿದ್ದರು. ಸೆಮಿಫೈನಲ್ ಪಂದ್ಯದಲ್ಲೂ ಅರ್ಧಶತಕ ಸಿಡಿಸಿ ಮಿಂಚಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!