ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್‌ನ ಫಾಜಿಲ್ಕಾದಲ್ಲಿ ಗಡಿ ಭದ್ರತಾ ಪಡೆಗಳು ಪಾಕಿಸ್ತಾನದಿಂದ ಬಂದ ಡ್ರೋನ್‌ನ್ನು ಹೊಡೆದುರುಳಿಸಿದ್ದಾರೆ. ಇದರ ಜೊತೆಗೆ ಅಬೋಹರ್ ಗಡಿ ಬಳಿ ಎರಡು ಶಂಕಿತ ಮಾದಕವಸ್ತು ಪ್ಯಾಕ್‌ಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ನಿರ್ದಿಷ್ಟ ಮಾಹಿತಿ ಮೇರೆಗೆ ಬಿಎಸ್‌ಎಫ್ ಡ್ರೋನ್‌ನ್ನು ಹೊಡೆದುರುಳಿಸಿದ್ದು, ಡ್ರಗ್ಸ್ ಕೂಡ ವಶಪಡಿಸಿಕೊಂಡಿದೆ. ಡ್ರಗ್ಸ್ ಕಳ್ಳಸಾಗಣೆ ಪ್ರಯತ್ನವನ್ನು ಬಿಎಸ್‌ಎಫ್ ಪಡೆಗಳು ವಿಫಲಗೊಳಿಸಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.