ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನಿಂದ RDX ಸ್ಫೋಟಕ ತುಂಬಿ ಇಬ್ಬರು ಪಾಕಿಸ್ತಾನಿ ಉಗ್ರರು ಗೋವಾದತ್ತ ಹೊರಟಿದ್ದಾರೆ ಅನ್ನೋ ಕರೆಯೊಂದು ಮುಂಬೈ ಪೊಲೀಸರ ಕಂಟ್ರೋಲ್ ರೂಂಗೆ ಬಂದಿದೆ.
ಮಾಹಿತಿ ಬೆನ್ನಲ್ಲೇ ಅಲರ್ಟ್ ಆದ ಮುಂಬೈ ಪೊಲೀಸರು, ಭದ್ರತೆ ಹೆಚ್ಚಿಸಿದ್ದಾರೆ. ಇತ್ತ ಕೋಸ್ಟಲ್ ಗಾರ್ಡ್‌ಗೆ ಮಾಹಿತಿ ನೀಡಲಾಗಿದೆ. ಇತ್ತ ಗೋವಾ ಪೊಲೀಸರಿಗೂ ಮಾಹಿತಿ ರವಾನಿಸಲಾಗಿದೆ.
ಇಂದು ಬೆಳಗ್ಗೆ ಪಾಂಡೆ ಅನ್ನೋ ವ್ಯಕ್ತಿ ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ, ಮಂಬೈನಿಂದ ಇಬ್ಬರು ಪಾಕಿಸ್ತಾನಿ ಮೂಲದ ಉಗ್ರರು ಸ್ಫೋಟಕ ತುಂಬಿದ ಟ್ಯಾಂಕರ್ ಜೊತೆ ಗೋವಾದತ್ತ ಹೊರಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಮುಂಬೈ ಪೊಲೀಸರು ಕರೆಯಲ್ಲಿ ಸಿಕ್ಕ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದೆ.
ಮುಂಬೈ ಮೇಲೆ ನಡೆದ ದಾಳಿ ರೀತಿ ಗೋವಾದಲ್ಲಿ ವಿದ್ವಂಸಕ ಕೃತ್ಯ ಎಸಗಲು ಉಗ್ರರು ತಯಾರಿ ಮಾಡಿರುವ ಸಾಧ್ಯತೆ ಇದೆ. ಹೀಗಾಗಿ ಅಪಾಯ ತಪ್ಪಿಸಲು ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಪಾಂಡೆ ಅನ್ನೋ ವ್ಯಕ್ತಿ ಮಾಡಿದ ಕರೆ ಹುಸಿಯೇ? ಅಥವಾ ನಿಜಗವಾಗಲೂ ಈ ರೀತಿಯ ಬೆಳವಣಿಗೆ ನಡೆದಿದೆಯಾ ಅನ್ನೋ ಕುರಿತು ತನಿಖೆ ನಡೆಯುತ್ತಿದೆ.