Monday, October 20, 2025

ಮತ್ತೆ ಭಾರತದ ಮೇಲೆ ಪರಮಾಣು ಧಮ್ಕಿ ಹಾಕಿದ ಪಾಕ್ ಸೇನಾ ಮುಖ್ಯಸ್ಥ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನಿ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮತ್ತೆ ಭಾರತದ ವಿರುದ್ಧ ಹೊಸ ಬೆದರಿಕೆ ಹಾಕಿದ್ದು, ಮತ್ತೊಮ್ಮೆ ಪರಮಾಣು ಯುದ್ಧದ ಬೆದರಿಕೆ ಹಾಕಿದ್ದಾರೆ.

ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಭಾರತದ ವಿರುದ್ಧದ ಹಲವಾರು ಹೇಳಿಕೆ ನೀಡಿದ್ದರು. ಇದು ಆತನ ಭಾರತ ವಿರೋಧಿ ನಿಲುವನ್ನು ಬಹಿರಂಗಪಡಿಸಿತ್ತು. ಅಸಿಮ್ ಮುನೀರ್ ಮತ್ತೊಮ್ಮೆ ಇದೇ ರೀತಿಯ ಭಾರತ ವಿರೋಧಿ ಹೇಳಿಕೆಗಳು ಹೊರಬಂದಿವೆ.

ಪಾಕಿಸ್ತಾನದ ಮೇಲೆ ಅಫ್ಘಾನ್ ಬಾಂಬ್‌ಗಳ ಮಳೆ ಸುರಿಸುತ್ತಿದ್ದರೂ ಅಸಿಮ್ ಮುನೀರ್ ಭಾರತ ವಿರೋಧಿ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟಿಲ್ಲ. ಇಸ್ಲಾಮಾಬಾದ್‌ನ ವಿಸ್ತರಿಸುತ್ತಿರುವ ಮಿಲಿಟರಿ ಸಾಮರ್ಥ್ಯಗಳು ಭಾರತದ ಭೌಗೋಳಿಕ ಯುದ್ಧಭೂಮಿಯನ್ನು ಛಿದ್ರಗೊಳಿಸಬಹುದು ಎಂದು ಅಸಿಮ್ ಮುನೀರ್ ಹೇಳಿದ್ದಾರೆ.

ಕಾಕುಲ್‌ನಲ್ಲಿರುವ ಪಾಕಿಸ್ತಾನ ಮಿಲಿಟರಿ ಅಕಾಡೆಮಿ (ಪಿಎಂಎ)ಯಲ್ಲಿ ಇಂದು ಪ್ರಚೋದನಕಾರಿ ಭಾಷಣ ಮಾಡಿದ ಅಸಿಮ್ ಮುನೀರ್, ಪರಮಾಣು ರಹಿತ ವಾತಾವರಣದಲ್ಲಿ ಯುದ್ಧಕ್ಕೆ ಸ್ಥಳವಿಲ್ಲ ಎಂದು ಹೇಳಿದ್ದಾರೆ. ನಮ್ಮ ಮೇಲಿನ ಸಣ್ಣ ಪ್ರಚೋದನೆ ಕೂಡ ಪಾಕಿಸ್ತಾನದಿಂದ ನಿರ್ಣಾಯಕವಾದ ಪ್ರತಿಕ್ರಿಯೆಯನ್ನು ಆಹ್ವಾನಿಸುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಹೊಸದಾಗಿ ಯುದ್ಧವನ್ನು ಪ್ರಚೋದಿಸಿದರೆ ಪಾಕಿಸ್ತಾನವು ಯುದ್ಧವನ್ನು ಪ್ರಾರಂಭಿಸಿದವರ ನಿರೀಕ್ಷೆಗಳನ್ನು ಮೀರಿ ಪ್ರತಿಕ್ರಿಯಿಸುತ್ತದೆ. ಆ ದುರಂತದ ಪರಿಣಾಮಗಳ ಹೊಣೆಗಾರಿಕೆ ಭಾರತದ ಮೇಲಿರುತ್ತದೆ ಎಂದು ಅವರು ಬೆದರಿಕೆ ಹಾಕಿದ್ದಾರೆ.

ಪಾಕಿಸ್ತಾನಿ ಸೇನೆಯು ತಾಲಿಬಾನ್ ಜೊತೆಗಿನ ಮುಖಾಮುಖಿಗಾಗಿ ಟೀಕೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಮುನೀರ್ ಈ ಹೇಳಿಕೆ ನೀಡಿದ್ದಾರೆ.

error: Content is protected !!