ಭಾರತ ಸೇನೆ ಸಿಂಹ ಘರ್ಜನೆಗೆ ಬಾಲ ಮುದುರಿಕೊಂಡ ಪಾಕ್.. Exclusive Attack ವಿಡಿಯೋ ರಿಲೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಪಾಕಿಸ್ತಾನ ನಡುವಿನ ದಿನೇದಿನೇ ಯುದ್ಧ ಬಿಕ್ಕಟ್ಟು ಹೆಚ್ಚಾಗ್ತಿದೆ. ‘ಆಪರೇಷನ್ ಸಿಂದೂರ’ ನಂತರ ನಡೆದ ಬೆಳವಣಿಗೆಗಳಿಂದಾಗಿ ಭಾರತ ತನ್ನ ರಕ್ಷಣೆಗಾಗಿ ಪಾಪಿ ಪಾಕಿಸ್ತಾನ​ ಮೇಲೆ ದಾಳಿ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಯಿತು. ಅಂತೆಯೇ ಗುರುವಾರ ಭಾರತ-ಪಾಕ್ ಮಧ್ಯೆ ಘರ್ಷಣೆ ಶುರುವಾಗಿದೆ.

ಭಾರತ ಉಡಾಯಿಸಿದ್ದ ಡ್ರೋಣ್​ಗಳು, ಮಿಸೈಲ್​​ಗಳು ಮತ್ತು ಶೆಲ್​​ಗಳು ಪಾಕಿಸ್ತಾನದ ಕೆಲವು ಭಾಗಗಳನ್ನು ಅಕ್ಷರಶಃ ಪುಡಿಪುಡಿ ಮಾಡಿವೆ. ಇದರ ಪರಿಣಾಮ ಪಾಕಿಸ್ತಾನದ ಪ್ರಮುಖ ಸೇನಾ ನೆಲೆಗಳು ಧ್ವಂಸಗೊಂಡಿವೆ. ದಾಳಿಗೆ ಸಂಬಂಧಿಸಿದ ಒಂದು ಸಣ್ಣ ತುಣುಕನ್ನು ಭಾರತೀಯ ಸೇನೆ ಮೊದಲ ಬಾರಿಗೆ ಹಂಚಿಕೊಂಡಿದೆ.

“ಪಾಕಿಸ್ತಾನ ಸಶಸ್ತ್ರ ಪಡೆಗಳು 2025 ರ ಮೇ 08 ಮತ್ತು 09 ರ ಮಧ್ಯರಾತ್ರಿ ಇಡೀ ಪಶ್ಚಿಮ ಗಡಿಯಲ್ಲಿ ಡ್ರೋನ್‌ಗಳು ಮತ್ತು ಇತರ ಯುದ್ಧ ಸಾಮಗ್ರಿಗಳನ್ನು ಬಳಸಿಕೊಂಡು ಅನೇಕ ದಾಳಿಗಳನ್ನು ನಡೆಸಿದವು. ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕ್ ಪಡೆಗಳು ಹಲವಾರು ಕದನ ವಿರಾಮ ಉಲ್ಲಂಘನೆಗಳನ್ನು ಆಶ್ರಯಿಸಿದವು. ಈ ಡ್ರೋನ್ ದಾಳಿಗಳನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಲಾಯಿತು ಮತ್ತು CFV ಗಳಿಗೆ ಸೂಕ್ತ ಉತ್ತರ ನೀಡಲಾಯಿತು. ಭಾರತೀಯ ಸೇನೆಯು ರಾಷ್ಟ್ರದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಬದ್ಧವಾಗಿದೆ. ಎಲ್ಲಾ ದುಷ್ಟ ವಿನ್ಯಾಸಗಳಿಗೆ ಬಲದಿಂದ ಪ್ರತಿಕ್ರಿಯಿಸಲಾಗುವುದು.” ಎಂದು ಭಾರತೀಯ ಸೇನೆ ಎಕ್ಸ್ ನಲ್ಲಿ ಈ ರೀತಿ ಪೋಸ್ಟ್ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!