ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಂಪಿಯನ್ಸ್ ಟ್ರೋಫಿಯಲ್ಲಿನ ಹೀನಾಯ ಪ್ರದರ್ಶನದ ಬೆನ್ನಲ್ಲೇ ಪಾಕ್ ತಂಡದ ನಾಯಕ ಮೊಹಮ್ಮದ್ ರಿಝ್ವಾನ್ ಅವರನ್ನು ದೇಶೀಯ ಟೂರ್ನಿಯಲ್ಲಿ ಆಡುವಂತೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಸೂಚಿಸಿತ್ತು. ಇದಾಗ್ಯೂ ರಿಝ್ವಾನ್ ನ್ಯಾಷನಲ್ ಟಿ20 ಟೂರ್ನಿಯಲ್ಲಿ ಕಾಣಿಸಿಕೊಂಡಿಲ್ಲ.
ಪಾಕ್ ತಂಡದ ನಾಯಕನ ಈ ನಡೆಯ ವಿರುದ್ಧ ಇದೀಗ ಮಾಜಿ ಆಟಗಾರರು ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ.
ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ನ ಆದೇಶವನ್ನೇ ಪಾಲಿಸದಿರುವ ಮೊಹಮ್ಮದ್ ಅವರ ಕೇಂದ್ರ ಒಪ್ಪಂದವನ್ನು ಕೊನೆಗೊಳಿಸಿ. ಆಗ ಬುದ್ಧಿ ಬರುತ್ತೆ ಎಂದು ಪಾಕ್ ಮಾಜಿ ವೇಗಿ ಸಿಕಂದರ್ ಬಖ್ತ್ ಪಿಸಿಬಿಗೆ ಮನವಿ ಮಾಡಿದ್ದಾರೆ.