ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಮತ್ತಷ್ಟು ಗಂಭೀರಗೊಂಡಿದ್ದು, ಮಧ್ಯರಾತ್ರಿಯಲ್ಲಿ ನಡೆದ ಪಾಕಿಸ್ತಾನದ ವಾಯುದಾಳಿಯಲ್ಲಿ ಮಕ್ಕಳು ಸೇರಿಸಿ ಹಲವರು ಸಾವನ್ನಪ್ಪಿದ್ದಾರೆ. ಅಫ್ಘಾನ್ ವಕ್ತಾರ ಜಬಿಹುಲ್ಲಾ ಅವರ ಪ್ರಕಾರ, ಖೋಸ್ಟ್ ಹಾಗೂ ಕುನಾರ್-ಪಕ್ತಿಕಾ ಭಾಗಗಳಲ್ಲಿ ಮನೆಗಳೇ ಗುರಿಯಾಗಿದ್ದು, ಜೀವಹಾನಿ ಮತ್ತು ಆಸ್ತಿ ನಷ್ಟ ಸಂಭವಿಸಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ, ಟಿಟಿಪಿ ಅಡಗುತಾಣಗಳೇ ಗುರಿ ಎಂದು ಹೇಳಿಕೊಳ್ಳುತ್ತಿದ್ದರೆ, ಅಫ್ಘಾನ್ ಸರ್ಕಾರ ಇದನ್ನು ನಿರಾಕರಿಸುತ್ತದೆ. ಕಳೆದ ಕೆಲವು ತಿಂಗಳಿಂದ ಎರಡೂ ದೇಶಗಳ ನಡುವೆ ಹೆಚ್ಚುತ್ತಿರುವ ದಾಳಿಗಳು ಶಾಂತಿ ಪ್ರಕ್ರಿಯೆಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿವೆ.
ಆಂತರಿಕ ಭದ್ರತಾ ದಾಳಿಗಳು, ಪೇಶಾವರ ಮಿಲಿಟರಿ ನೆಲೆಯಲ್ಲಿ ನಡೆದ ಆತ್ಮಾಹುತಿ ಸ್ಫೋಟ ಸೇರಿದಂತೆ, ಪಾಕಿಸ್ತಾನದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದವು. ಈ ದಾಳಿಗಳಿಗೆ ಟಿಟಿಪಿ ಕಾರಣ ಎಂದು ಪಾಕಿಸ್ತಾನ ಆರೋಪಿಸುತ್ತಿದ್ದು, ಪ್ರತೀಕಾರದ ಹೆಸರಿನಲ್ಲಿ ಅಫ್ಘಾನಿಸ್ತಾನದೊಳಗಿನ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿರುವುದು ಮತ್ತೆ ಪ್ರಶ್ನೆಗೆ ಕಾರಣವಾಗಿದೆ.

