ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆ ಇರಾನ್ ಹಾಗೂ ಅಮೆರಿಕ ನಡುವೆ ಸಂಧಾನ ಮಾಡಿಸಲು ಹೊರಟ ಪಾಕಿಸ್ತಾನಕ್ಕೆ ದೊಡ್ಡ ಆಘಾತವೇ ಎದುರಾಗಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ತೆರಳುತ್ತಿದ್ದ ಪಾಕಿಸ್ತಾನದ ಹಡಗನ್ನು ಇರಾನ್ನ ನೌಕಾಪಡೆ ವಾಪಾಸ್ ಕಳುಹಿಸಿದೆ.
ಹಾರ್ಮುಜ್ ಜಲಸಂಧಿ ಮೂಲಕ ಪಾಕಿಸ್ತಾನದ ಕರಾಚಿಗೆ ಹೊರಟಿದ್ದ ಹಡಗು ಕಾನೂನು ಶಿಷ್ಟಾಚಾರಗಳನ್ನು ಉಲಂಘಿಸಿದ್ದು, ಈ ಹಿನ್ನೆಲೆ ಹಡಗು ಸಂಚಾರಕ್ಕೆ ಅನುಮತಿ ನೀಡಿಲ್ಲ ಎಂದು ಇರಾನ್ನ ನೌಕಾ ಕಮಾಂಡರ್ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ತಿಳಿಸಿದ್ದಾರೆ.
ಹಾರ್ಮುಜ್ ಜಲಸಂಧಿ ಮೂಲಕ ಯಾವುದೇ ಹಡಗು ಹಾದುಹೋಗಬೇಕಾದರೆ ಇರಾನ್ನ ಕಡಲ ಪ್ರಾಧಿಕಾರದ ಜೊತೆಗೆ ಸಮನ್ವಯ ಸಾಧಿಸುವ ಅಗತ್ಯ. ಇಲ್ಲಿ ಇರಾನ್ ಜನರ ಬೆಂಬಲವಿಲ್ಲದೇ ಯಾವುದೇ ಹಡಗು ತೆರಳಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಇದರಿಂದಾಗಿ ಇರಾನ್ ಹಾಗೂ ಅಮೆರಿಕ ನಡುವೆ ಶಾಂತಿ ಮಾತುಕತೆಗೆ ಹೊರಟಿದ್ದ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ಬಿದ್ದಿದೆ.



