October 16, 2026
Friday, October 16, 2026
spot_img

ಅಮೆರಿಕದ ಯುಎಸ್‌ಎಸ್ ಅಬ್ರಹಾಂ ಲಿಂಕನ್ ಯುದ್ಧನೌಕೆ ಮೇಲೆ ಇರಾನ್ ಕ್ಷಿಪಣಿ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಯುದ್ಧನೌಕೆ ಯುಎಸ್‌ಎಸ್‌ ಅಬ್ರಹಾಂ ಲಿಂಕನ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಈ ಮೂಲಕ ಟ್ರಂಪ್ ಕದನ ವಿರಾಮ ಮಾತಿಗೆ ಸೆಡ್ಡು ಹೊಡೆದಿದೆ.

ಇರಾನ್ ನೌಕಾಪಡೆಯ ಕಮಾಂಡರ್ ರಿಯರ್ ಅಡ್ಮಿರಲ್ ಶಹ್ರಾಮ್ ಇರಾನಿ, ದಾಳಿಯ ಎಚ್ಚರಿಕೆ ನೀಡಿದ್ದ ಕೆಲವೇ ಗಂಟೆಯಲ್ಲಿ ಮೆಡಿಟರೇನಿಯನ್ ಸಮುದ್ರದಲ್ಲಿ ಯುಎಸ್ಎಸ್ ಅಬ್ರಹಾಂ ಲಿಂಕನ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ಇರಾನ್ ಸೇನೆಯ ಸಾರ್ವಜನಿಕ ಸಂಪರ್ಕ ವಿಭಾಗ ಹೇಳಿಕೊಂಡಿದೆ.

ನಮ್ಮ ಕಣ್ಗಾವಲಿನಲ್ಲಿ ಅಮೆರಿಕದ ಯುದ್ಧನೌಕೆ ಇದ್ದು, ಒಂದು ವೇಳೆ ನಮ್ಮ ವ್ಯಾಪ್ತಿಯೊಳಗೆ ಬರಲು ಮುಂದಾದ್ದರೆ ಭೀಕರ ದಾಳಿ ನಡೆಸಲು ಸಿದ್ದ ಎಂದು ಇರಾನಿ ಎಚ್ಚರಿಕೆ ನೀಡಿದ್ದಾರೆ.

ಇರಾನ್ ಬಲಿಷ್ಠ ಕ್ಷಿಪಣಿಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ನಮ್ಮ ನೆಲ, ಜಲ,ಸಾರ್ವಭೌಮತ್ವ ರಕ್ಷಿಸಲು ಯಾವುದೇ ದಾಳಿಗೂ ಸಿದ್ಧರಾಗಿಯೇ ಇದ್ದೇವೆ ಎಂದು ತಿಳಿಸಿದ್ದಾರೆ.

Must Read