ಅಂತಾರಾಷ್ಟ್ರೀಯ ಮಟ್ಟದಲ್ಲಿ ಮರ್ಯಾದೆ ಕಳೆದುಕೊಂಡ ಪಾಕ್: PSL ನಡೆಸೋಕೆ ಅವಕಾಶ ಕೊಡಲ್ಲ ಎಂದ ಯುಎಇ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ-ಪಾಕಿಸ್ತಾನ ಉದ್ವಿಗ್ನತೆ ಐಪಿಎಲ್ ಹಾಗೂ ಪಿಎಸ್ಎಲ್ ಮೇಲೆ ಬಹುದೊಡ್ಡ ಪರಿಣಾಮ ಬೀರಿದೆ.

ಈ ಉದ್ವಿಗ್ನತೆಯಿಂದ ಭಾರತ ಇನ್ನೊಂದು ವಾರ ಐಪಿಎಲ್ ಪಂದ್ಯಗಳನ್ನು ಮುಂದೂಡಿದ್ದು, ಪಾಕಿಸ್ತಾನ ತನ್ನ ಮುಂದಿನ ಪಂದ್ಯಗಳನ್ನು ಪಶ್ಚಿಮ ಏಷ್ಯಾದ ರಾಷ್ಟ್ರಗಳಲ್ಲಿ ಆಯೋಜಿಸುವುದಾಗಿ ಘೋಷಿಸಿದೆ.

ಆದರೆ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಯುಎಇಗೆ ಮನವಿ ಮಾಡಿದ್ದು, ಈ ಮನವಿಯನ್ನು ಯುಎಇಯ ಎಮಿರೇಟ್ಸ್ ಕ್ರಿಕೆಟ್ ಮಂಡಳಿ ತಿರಸ್ಕರಿಸಿದೆ ಎಂದು ವರದಿಯಾಗಿದೆ.

ಯುಎಇ ಕ್ರಿಕೆಟ್ ಮಂಡಳಿಯು ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದ ತಮ್ಮ ದೇಶದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಎಚ್ಚರಿಕೆಯಿಂದ ಇದೆ ಎಂದು ವರದಿಯಾಗಿದೆ. ಸದ್ಯ ಪಿಸಿಬಿ ಮನವಿಗೆ ಸ್ಪಂದಿಸಿದ ಏನಾದ್ರೂ ಪಿಎಸ್‌ಎಲ್ ಆಯೋಜಿಸಲು ಒಪ್ಪಿಕೊಂಡರೆ ಮುಂದಿನ ದಿನಗಳಲ್ಲಿ ಯುಎಇ ಪಾಕಿಸ್ತಾನ ಸ್ನೇಹಿ ರಾಷ್ಟ್ರ ಎಂಬ ಹಣೆಪಟ್ಟಿಗೆ ಒಳಗಾಗುವ ಆತಂಕ ವ್ಯಕ್ತಪಡಿಸಿ ಹಿಂದೇಟು ಹಾಕಿದ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!