ಬುದ್ಧಿ ಕಲಿಯದ ಪಾಕಿಸ್ತಾನ: ಭಾರತೀಯ ಸೇನೆ ಧ್ವಂಸ ಮಾಡಿದ್ದ ಉಗ್ರರ ನೆಲೆ ಮತ್ತೆ ಸ್ಥಾಪನೆ?

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಭಾರತೀಯ ಸೇನೆಯ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ನಾಶಪಡಿಸಿದ ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳು ಮತ್ತು ತರಬೇತಿ ಶಿಬಿರಗಳನ್ನು ಪುನಃ ಸ್ಥಾಪಿಸಲು ಪಾಕಿಸ್ತಾನ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಮೂರು ಪ್ರಮುಖ ಭಯೋತ್ಪಾದಕ ಸಂಘಟನೆಗಳಾದ ಜೈಶ್-ಎ-ಮೊಹಮ್ಮದ್ (JeM) ಲಷ್ಕರ್-ಎ-ತೊಯ್ಬಾ (LeT) ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ಗಳಿಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಗುರಿಯಾಗಿಟ್ಟುಕೊಂಡು ಭಾರತೀಯ ಪಡೆಗಳು ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ನಿಖರವಾದ ದಾಳಿ ನಡೆಸಿ ನಾಶ ಮಾಡಲಾಗಿತ್ತು.

ಇದೀಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಪಕ್ಕದ ಪ್ರದೇಶಗಳಲ್ಲಿ ಈ ಭಯೋತ್ಪಾದಕ ನೆಲೆಗಳನ್ನು ಮತ್ತೆ ನಿರ್ಮಿಸಲು ಪಾಕಿಸ್ತಾನಿ ಸೇನೆ, ಅದರ ಗುಪ್ತಚರ ಸಂಸ್ಥೆ ಐಎಸ್‌ಐ ಸಹಾಯ ಮಾಡುತ್ತಿದೆ ಎಂದು ಹೇಳಲಾಗಿದೆ.

ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು, ಐಎಸ್‌ಐ ಸಹಯೋಗದೊಂದಿಗೆ, ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿಯ ದಟ್ಟ ಕಾಡುಗಳಲ್ಲಿ ಹೈಟೆಕ್, ಸಣ್ಣ ಭಯೋತ್ಪಾದಕ ಶಿಬಿರಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿವೆ ಎಂದು ಗುಪ್ತಚರ ಸಂಸ್ಥೆಗಳು ಸೂಚಿಸಿವೆ.

ಇದೀಗ ಮತ್ತೆ ನಿರ್ಮಿಸಲಾಗುತ್ತಿರುವ ಶಿಬಿರಗಳು ಲುನಿ, ಪುಟ್ವಾಲ್, ತೈಪು ಪೋಸ್ಟ್, ಜಮಿಲಾ ಪೋಸ್ಟ್, ಉಮ್ರಾನ್ವಾಲಿ, ಚಪ್ರಾರ್, ಫಾರ್ವರ್ಡ್ ಕಹುತಾ, ಚೋಟಾ ಚಕ್ ಮತ್ತು ಜಂಗ್ಲೋರಾ ಮುಂತಾದ ಪ್ರದೇಶಗಳಲ್ಲಿವೆ. ಈ ಶಿಬಿರಗಳು ಥರ್ಮಲ್ ಇಮೇಜರ್‌ಗಳು, ರಾಡಾರ್ ಮತ್ತು ಉಪಗ್ರಹ ಕಣ್ಗಾವಲುಗಳನ್ನು ಎದುರಿಸಲು ವಿನ್ಯಾಸಗೊಳಿಸಲಾದ ಸುಧಾರಿತ ತಂತ್ರಜ್ಞಾನಗಳೊಂದಿಗೆ ಸಜ್ಜುಗೊಳ್ಳುತ್ತಿವೆ ಎಂದು ತಿಳಿದು ಬಂದಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!