ಹೊಸದಿಗಂತ ಡಿಜಿಟಲ್ ಡೆಸ್ಕ್:
ಶುಕ್ರವಾರ ಪಂಜಾಬ್‌ನ ಗಡಿ ನಿಯಂತ್ರಣ ರೇಖೆಯಲ್ಲಿ ಒಳನುಸುಳಲು ಯತ್ನಿಸಿದ್ದ ಪಾಕಿಸ್ತಾನಿ ನುಸುಳುಕೋರನೊಬ್ಬನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಗುಂಡಿಕ್ಕಿ ಕೊಂದಿದೆ. ನುಸುಳುಕೋರ ಗಡಿ ಬೇಲಿಯ ಸಮೀಪಕ್ಕೆ ತೆರಳುತ್ತಿದ್ದಂತೆ, ಸೈನಿಕರು ಗುಂಡು ಹಾರಿಸಿದ್ದಾರೆ.
ಪಂಜಾಬ್‌ನ ತರ್ನ್ ತರನ್‌ನಲ್ಲಿ ಇಂದು ಬೆಳಗ್ಗೆ ಒಳನುಸುಳುಕೋರನ ಚಲನವಲನವನ್ನು ಗಮನಿಸಿದ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿವೆ. ಗುಂಡಿನ ಮಳೆಗೆರದು ಓರ್ವನನ್ನು ಹತ್ಯೆ ಮಾಡಲಾಗಿದೆ.
ಇತ್ತೀಚೆಗೆ ಗಡಿಯಲ್ಲಿ ನುಸುಳುಕೋರರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಅವರನ್ನು ತಡೆಯುವಲ್ಲಿ ಸೇನೆ ಸಫಲವಾಗಿದೆ. ಮೇ ತಿಂಗಳಲ್ಲಿ ಪಂಜಾಬ್ ಗಡಿಯಲ್ಲಿ ಬಿಎಸ್‌ಎಫ್ ಪಡೆಗಳು ಗಡಿಯುದ್ದಕ್ಕೂ ಕಳುಹಿಸಲಾದ 22 ಡ್ರೋನ್‌ಗಳನ್ನು ವಶಪಡಿಸಿಕೊಂಡಿವೆ. ಸೋಮವಾರವೂ ಇಬ್ಬರು ಪಾಕಿಸ್ತಾನಿ ನುಸುಳುಕೋರರನ್ನು ಬಿಎಸ್‌ಎಫ್ ಯೋಧರು ಗುಂಡಿಕ್ಕಿ ಕೊಂದಿದ್ದರು.