ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕ್ ಹಾಗೂ ನಮ್ಮ ನಡುವಿನ ಎಲ್ಲಾ ವಿಚಾರವನ್ನು ನಿಭಾಯಿಸುವ ಶಕ್ತಿ ಭಾರತಕ್ಕಿದೆ ಎಂದು ಪ್ರಧಾನಿಯವರು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದವರು ಏನೇ ಉಪಟಳ ಮಾಡಿದ್ರೂ ಅವರಿಗೆ ಅಂತಿಮವಾಗಿ ದೊಡ್ಡಮಟ್ಟದ ಹೊಡೆತ ಬೀಳಲಿದೆ. ರಷ್ಯಾ ಮತ್ತು ಉಕ್ರೇನ್ ಇವತ್ತು ಯಾವ ಸ್ಥಿತಿ ಅನುಭವಿಸ್ತಾ ಇವೆ ಎಂದು ಎಲ್ಲರಿಗೂ ತಿಳಿದಿದೆ. ಆ ದೃಷ್ಟಿಯಿಂದ ಕೆಲವು ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದರು. ಇನ್ನೂ ಪಾಕ್ ಬುದ್ಧಿ ಕಲಿಯದೇ ಇದ್ರೇ ಸರ್ವನಾಶವಾಗಲಿದೆ ಎಂದರು.
ಭಾರತೀಯ ಸೇನೆಯು ಕೇವಲ ಪಾಕ್‌ನ ಉಗ್ರ ನೆಲಗಳ ಮೇಲೆ ಮಾತ್ರ ದಾಳಿ ಮಾಡಿದೆ. ನಮ್ಮ ಸೈನಿಕರು ದೇಶಕ್ಕೆ ಗೌರವ ತರುವ ಕೆಲಸ ಮಾಡಿದ್ದಾರೆ. ಕೇವಲ ಎರಡೇ ದಿನದಲ್ಲಿ ಪಾಕ್ ಶರಣಾಗತಿಯಾಯ್ತು. ನನ್ನ ವೈಯಕ್ತಿಕ ಅಭಿಪ್ರಾಯವೇನೆಂದರೆ, ನಮ್ಮ ದಾಳಿಯಿಂದ ಪಾಕ್‌ಗೆ ಮುಖಭಂಗವಾಗಿದೆ. ಭಾರತ ಸೈನಿಕರ ದಾಳಿಯು ಪಾಕ್‌ಗೆ ನಡುಕ ಉಂಟುಮಾಡಿದೆ ಎಂದು ನುಡಿದರು.
ಯುದ್ಧದ ಬಗ್ಗೆ ಜನರಲ್ಲಿ ಎರಡು ತರಹದ ಭಾವನೆಗಳಿವೆ. ಯುದ್ಧವಾಗಬೇಕು ಅನ್ನೋದು ಒಂದು ವರ್ಗದ ಭಾವನೆಯಾದರೆ, ಮತ್ತೊಂದೆಡೆ ನಮಗೆ ಆಗುವ ಪ್ರಾಣಿಹಾನಿಯಾಗುತ್ತದೆ. ನಮಗೆ ಶಕ್ತಿಯಿದೆ ಅಂತಾ ಇನ್ನೊಂದು ದೇಶದ ಮೇಲೆ ಗದಾಪ್ರಹಾರ ಮಾಡಿದ್ರೇ, ಇವತ್ತು ಉಕ್ರೇನ್, ರಷ್ಯಾದವರು ಒಂದು ವರ್ಷದಿಂದ ಯುದ್ಧ ಮಾಡಿ ಏನು ಸಾಧನೆ ಮಾಡ್ತಾ ಇದ್ದಾರೆ ಎಂಬುದು ಕೆಲವರ ಭಾವನೆಯಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಬ್ಲಾಕ್ ಸೀರೆಯಲ್ಲಿ ಕಲರ್‌ಫುಲ್ ಆಗಿ ಮಿಂಚಿದ ನಭಾ!