ಅತ್ತ ಆರ್ಥಿಕ ಬಿಕ್ಕಟ್ಟು, ಇತ್ತ ಕ್ರಿಕೆಟ್ ಎಂಜಾಯ್ ಮಾಡುತ್ತಿರುವ ಪಾಕ್ ಪ್ರಧಾನಿ ಶೆಹಬಾಜ್‌ ಶರೀಫ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಪಾಕ್ ನಲ್ಲಿ ದಿನೇ ದಿನೇ ಆರ್ಥಿಕ ಬಿಕ್ಕಟ್ಟು ಹೆಚ್ಚುತ್ತಿದ್ದು, ಇದರ ನಡುವೆ ಇಷ್ಟು ಗಂಭೀರ ಸಮಸ್ಯೆಯನ್ನು ಪ್ರಧಾನಿ ಶೆಹಬಾಜ್‌ ಶರೀಫ್‌ ನಿರ್ಲಕ್ಷ್ಯ ತೋರುತ್ತಿದ್ದಾರೆ .

ಇಡೀ ದೇಶವೇ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ. ಇಂತಹ ಸನ್ನಿವೇಶದಲ್ಲಿ ಪಾಕ್‌ ಪ್ರಧಾನಿ ಕ್ರಿಕೆಟ್‌ ವೀಕ್ಷಿಸಿ ಎಂಜಾಯ್‌ ಮಾಡುತ್ತಿದ್ದಾರೆಂದು ದೇಶದ ಜನತೆ ಕಿಡಿಕಾರಿದ್ದಾರೆ.

ʼಪವರ್‌ ಹಿಟ್ಟಿಂಗ್‌ ಮಾಡಿದ ಮತ್ತೊಬ್ಬ ಅಫ್ರಿದಿʼ ಎಂದು ಪಾಕಿಸ್ತಾನ ಸೂಪರ್‌ ಲೀಗ್‌ಗೆ ಸಂಬಂಧಿಸಿದಂತೆ ಶಾಹೀನ್ ಅಫ್ರಿದಿಯನ್ನು ಹಾಡಿಹೊಗಳಿ ಪಾಕ್‌ ಪ್ರಧಾನಿ ಟ್ವೀಟ್‌ ಮಾಡಿದ್ದರು. ಇದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ.

ಪಾಕ್‌ ಪ್ರಧಾನಿ ಟ್ವೀಟ್‌ಗೆ ದೇಶದ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲು ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ಸರಿಪಡಿಸುವ ಕಡೆ ಗಮನಕೊಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಿಸ್ಟರ್ ಪ್ರಧಾನ ಮಂತ್ರಿಗಳು ಕ್ರಿಕೆಟ್ ನೋಡುವುದರಲ್ಲಿ ನಿರತರಾಗಿದ್ದಾರೆ. ಏಕೆಂದರೆ ಪಾಕಿಸ್ತಾನವು ಅತ್ಯಧಿಕ ಹಣದುಬ್ಬರ ದರವನ್ನು ದಾಖಲಿಸಿದೆ. ಇದುವರೆಗೆ IMFನೊಂದಿಗೆ ಯಾವುದೇ ಒಪ್ಪಂದ ಸಾಧ್ಯವಾಗಿಲ್ಲ. ತಾಯ್ನಾಡಿಗಾಗಿ ಕಳೆದ 11 ತಿಂಗಳಲ್ಲಿ ನಿಮ್ಮ ಉತ್ತಮ ಸೇವೆಗಳಿಗೆ ತುಂಬಾ ಧನ್ಯವಾದಗಳು ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!