ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಅಂದ್ರೆ ಅಲ್ಲಿ ಎಲ್ಲವೂ ಉಲ್ಟಾ. ಒಂದು ದೇಶದಲ್ಲಿ ಅಪರೂಪದ ಸಾಧನೆ ಮಾಡಿದವರಿಗೆ ಗೌರವ ನೀಡುವುದು ಸರ್ವ ಸಾಮಾನ್ಯ. ಅದರಲ್ಲೂ ಸೇನೆಯಲ್ಲಿದ್ದು, ಶೌರ್ಯ ಪರಾಕ್ರಮ ತೋರಿದರೆ ಸರ್ಕಾರದಿಂದ ಪದಕಗಳನ್ನು ಪಡೆಯುತ್ತಾರೆ. ಆದರೆ, ಪಾಕಿಸ್ತಾನದಲ್ಲಿ ಮಾತ್ರ ಕಾರ್ಯಾಚರಣೆ, ಯುದ್ಧದಲ್ಲಿ ಸೋತವರಿಗೆ ಪದಕ ನೀಡುತ್ತಾರೆ .
ಹೌದು, ಆಪರೇಷನ್ ಸಿಂದೂರ ಸಮಯದಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಪ್ರತಿ ಮಿಸೈಲ್, ಡ್ರೋನ್ ಗಳನ್ನು ಹೊಡೆದುರುಳಿಸಿತ್ತು. ಆ ಬಳಿಕ ಸೋತು ಸುಣ್ಣವಾದ ಪಾಕ್ ಕದನ ವಿರಾಮವನ್ನೇ ಮಾಡಿತ್ತು. ಆದ್ರೆ ಇತ್ತ ಒಂದೇ ಒಂದು ಯುದ್ಧ ಗೆಲ್ಲದೆ, ಸೇನಾ ಕಾರ್ಯಾಚರಣೆಯನ್ನೂ ಸರಿಯಾಗಿ ಮಾಡದೇ ಇದ್ದ ಪಾಕಿಸ್ತಾನದ ಸಿಡಿಎಸ್ ಅಥವಾ ಚೀಫ್ ಆಫ್ ಆರ್ಮಿ ಸ್ಟಾಫ್ ಆಗಿದ್ದ ಅಸೀಮ್ ಮುನೀರ್ನನ್ನು ಈಗ ಫೀಲ್ಡ್ ಮಾರ್ಷಲ್ ಆಗಿ ಭಡ್ತಿ ನೀಡಲಾಗಿದೆ.
ಆಪರೇಷನ್ ಸಿಂದೂರ ಸಮಯದಲ್ಲಿ ಭಾರತದ ಸೇನೆ ಪಾಕಿಸ್ತಾನದಲ್ಲಿದ್ದ 9 ಟೆರರಿಸ್ಟ್ ಕೇಂದ್ರ ಕಚೇರಿ ಅಥವಾ ಸ್ಥಳಗಳ ಮೇಲೆ ಬಾಂಬ್ ಹಾಕಿತ್ತು. ಅದಲ್ಲದೆ, 12 ಏರ್ಬೇಸ್ಗಳ ಮೇಲೆ ಬಾಂಬ್ ದಾಳಿ, ಪಾಕಿಸ್ತಾನ ಸೇನೆಯ ಏರ್ ಡಿಫೆನ್ಸ್ ಸಿಸ್ಟಮ್ಅನ್ನು ಜಾಮ್ಮಾಡಿದ್ದು ಮಾತ್ರವಲ್ಲದೆ, ಲಾಹೋರ್ಗೆ ಡ್ರೋನ್ ಕಳಿಸಿ ಅದನ್ನು ಧ್ವಂಸ ಮಾಡಿತ್ತು. ಪ್ರತಿದಾಳಿಯಲ್ಲಿ ಪಾಕಿಸ್ತಾನ ಬಳಸಿದ್ದ ಚೀನಾ ಮೂಲದ ಯುದ್ಧೋಪಕರಣಗಳು, ಟರ್ಕಿಶ್ ಡ್ರೋನ್ಗಳನ್ನು ನಿರಾಯಾಸವಾಗಿ ಹೊಡೆದುರುಳಿಸಿತ್ತು. ಇಷ್ಟೆಲ್ಲಾ ಆದರೂ ಅಪಾಕಿಸ್ತಾನ ಅಸೀಮ್ ಮುನೀರ್ಗೆ ಫೀಲ್ಡ್ ಮಾರ್ಷಲ್ ಭಡ್ತಿ ನೀಡಿದ್ದು ಅಚ್ಚರಿಗೆ ಕಾರಣವಾಗಿದೆ.
ಈತ ಪಡೆದಿರುವ ಶ್ರೇಣಿ ಅತ್ಯಂತ ಅಪರೂಪ. ಕೊನೆಯ ಬಾರಿಗೆ 1959 ರಲ್ಲಿ ಜನರಲ್ ಅಯೂಬ್ ಖಾನ್ ಅವರಿಗೆ ನೀಡಲಾಗಿತ್ತು. ಪ್ರಧಾನಿ ಶೆಹಬಾಜ್ ಷರೀಫ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪಾಕಿಸ್ತಾನ ಸೇನೆಯ ಉನ್ನತ ಹುದ್ದೆಗೆ ನೇಮಕಗೊಳ್ಳುವ ಮೊದಲು, ಮುನೀರ್ ಅವರು ಫೆಬ್ರವರಿ 2019 ರಲ್ಲಿ ಪುಲ್ವಾಮಾ ದಾಳಿಯ ನಂತರ 40 ಸಿಆರ್ಪಿಎಫ್ ಯೋಧರ ಸಾವಿಗೆ ಕಾರಣವಾದ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾದಾಗ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಅನ್ನು ಮುನ್ನಡೆಸಿದರು.