ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪರೇಷನ್ ಸಿಂದೂರ ಕಾರ್ಯಾಚರಣೆ ಬಳಿಕ ಪಾಕಿಸ್ತಾನದ ಪರಿಸ್ಥಿತಿ ಬಾಲ ಮುದುರಿದ ನಾಯಿಯಂತಾಗಿದೆ ಎಂದು ಪೆಂಟಗನ್ ಮಾಜಿ ಅಧಿಕಾರಿ ಮೈಕೆಲ್ ರೂಬಿನ್ ವ್ಯಂಗ್ಯವಾಡಿದ್ದಾರೆ.
ಭಾರತದ ಏಟಿಗೆ ವಾಯುನೆಲೆಗಳು ಧ್ವಂಸವಾದ ಬಳಿಕ ಕದನ ವಿರಾಮ ಘೋಷಿಸಿ ಪಾಕ್ ಬಾಲ ಮುದುರಿಕೊಂಡು ನಾಯಿಯಂತೆ ಓಡಿದೆ ಎಂದು ಹೇಳಿದ್ದಾರೆ.
ಪಾಕ್ ಸೇನೆಯು ತುಂಬಾ ಹೀನಾಯವಾಗಿ ಸೋತಿದೆ. ಏನೇಭಾರತ ರಾಜತಾಂತ್ರಿಕ ಮತ್ತು ಮಿಲಿಟರಿಯಲ್ಲಿ ವಿಜಯ ಸಾಧಿಸಿದೆ. ಈಗ ಎಲ್ಲರ ಗಮನವೂ ಪಾಕ್ ಪ್ರಯೋಜಿತ ಭಯೋತ್ಪಾದನೆ ಮೇಲೆ ಕೇಂದ್ರೀಕರಿಸಿದೆ ಎಂದು ತಿಳಿಸಿದ್ದಾರೆ.
ಇತ್ತ ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನಿ ಅಧಿಕಾರಿಗಳು ಭಾಗವಹಿಸಿದ್ದನ್ನು ನೋಡಿದರೆ, ಭಯೋತ್ಪಾದಕರು,ಪಾಕಿಸ್ತಾನಿ ಸಶಸ್ತ್ರ ಪಡೆಗಳ ಸದಸ್ಯರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ತೋರುತ್ತದೆ ಎಂದು ಹೇಳಿದ್ದಾರೆ.
ಪಾಕ್‌ನ ವಾಯುನೆಲೆಗಳ ಮೇಲೆ ದಾಳಿ ನಡೆಸಿ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಇದರಿಂದ ಪಾಕಿಸ್ತಾನ ಬಾಲ ಮುದುರಿದ ನಾಯಿಯಂತೆ ಹೆದರಿ ಕದನ ವಿರಾಮ ಸಾಧಿಸಲು ಪ್ರಯತ್ನಿಸಿತು. ಆದರೂ, ಪಾಕಿಸ್ತಾನ ಮುಂದೆ ಏನು ಮಾಡುತ್ತದೆ ಎಂಬುದು ಪ್ರಶ್ನೆಯಾಗಿದೆ. ಈ ದೇಶ ತನ್ನ ಮನೆಯನ್ನು ಸ್ವಚ್ಛಗೊಳಿಸಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.