ಪಾಕ್‌ ಷೇರುಪೇಟೆ ಭಾರೀ ಕುಸಿತ : ಒಂದೇ ದಿನ ಶೇ.6ರಷ್ಟು ಇಳಿಕೆ, ವಹಿವಾಟು ಸ್ತಬ್ಧ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

 ಪಾಕಿಸ್ತಾನದ ಕರಾಚಿ ಬಳಿ ಭಾರತವು ಮಿಲಿಟರಿ ಕಾರ್ಯಾಚರಣೆಯನ್ನು ಹೆಚ್ಚಿಸುತ್ತಿದೆ ಎನ್ನುವ ವದಂತಿಯಿಂದಾಗಿ ಪಾಕ್‌ ಷೇರುಪೇಟೆ ಭಾರೀ ಕುಸಿತ ಕಂಡಿದ್ದು, ಗುರುವಾರ ಒಂದೇ ದಿನ ಶೇ.6ರಷ್ಟು ಇಳಿಕೆಯಾಗಿದೆ.

ಈ ನಡುವೆ ಷೇರು ವಹಿವಾಟು ಒಂದು ಗಂಟೆ ಸ್ಥಗಿತಗೊಂಡಿತು. ಭಾರತದ ದಾಳಿ ನಡೆಸಿರುವ ವದಂತಿಗಳು ಆಧಾರ ರಹಿತವಾಗಿದ್ದರೂ, ಪಾಕ್ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಒಂದು ಗಂಟೆ ವಹಿವಾಟು ಸ್ಥಗಿತಕ್ಕೂ ಮುನ್ನ ಕೆಎಸ್‌ಇ100 ಸೂಚ್ಯಂಕವು ಗುರುವಾರ 6948.73 ಅಂಕಗಳಷ್ಟು ಕುಸಿತ ಕಂಡು 1,03,060ರಲ್ಲಿ ಮುಕ್ತಾಯಗೊಂಡಿತು. ಅ ನಂತರ ಷೇರುಪೇಟೆ ಶಾಂತಗೊಂಡ ಬಳಿಕ ಮತ್ತೆ ವಹಿವಾಟು ಪುನಾರಂಭಗೊಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!