ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ಪ್ರತೀಕಾರವಾಗಿ ನಡೆದ ಭಾರತೀಯ ಸೇನೆಯ ಪ್ರತೀಕಾರದ ದಾಳಿಗೆ ಥರಗುಟ್ಟಿರುವ ಪಾಕ್ ಇನ್ನೂ ಸಹಜಸ್ಥಿತಿಗೆ ಬಂದಿಲ್ಲ.
ಎಲ್ಲೆಲ್ಲೂ ಆತಂಕ ಇನ್ನೂ ಮನೆಮಾಡಿದ್ದು, ಪರಿಸ್ಥಿತಿ ನಿಭಾಯಿಸಲು ಪಾಕ್ ಆಡಳಿತ ಹೆಣಗಾಡುತ್ತಿದೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕೆಲವು ಭಾಗಗಳಲ್ಲಿ ಕೂಡಾ ದಾಳಿ ನಡೆದಿದ್ದು, ದಾಳಿಯಾಗುತ್ತಿದ್ದಂತೆ ಮಸೀದಿಯ ಮೈಕ್‌ಗಳಲ್ಲಿ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಘೋಷಿಸಲಾಗಿತ್ತು.
ಮುಜಫರಾಬಾದ್ ನಿವಾಸಿಗಳು ತಮ್ಮ ಮನೆಗಳನ್ನು ಬಿಟ್ಟು ಸುತ್ತಮುತ್ತಲಿನ ಗುಡ್ಡಗಳಿಗೆ ಓಡಿಹೋಗಿದ್ದು ಇನ್ನೂ ಪಾಪಸ್ ಬರಲು ಅಂಜುತ್ತಿದ್ದಾರೆ. ಮುಜಫರಾಬಾದ್‌ನಲ್ಲಿನ ಆಸ್ಪತ್ರೆಗಳು, ವ್ಯಾಪಾರ ಕೇಂದ್ರಗಳು, ಶಾಲೆಗಳನ್ನು ಮುಚ್ಚಲಾಗಿದ್ದು, ವಿದ್ಯಾರ್ಥಿಗಳ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. ದಾಳಿಯಿಂದ ಗಾಯಗೊಂಡಿರುವ ಕೆಲವು ಕೆಲವು ಸ್ಥಳೀಯರು ಚಿಕಿತ್ಸೆ ಪಡೆಯುತ್ತಿದ್ದಾರೆ.