ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವ ಪಾಕಿಸ್ತಾನ್ ತಂಡಕ್ಕೆ ಶ್ರೀಲಂಕಾ ವಿರುದ್ಧದ ಸರಣಿ ಮಹತ್ವದ ಪರೀಕ್ಷೆಯಾಗಲಿದೆ. ಆದರೆ ಈ ಸರಣಿಗೆ ಪ್ರಕಟಿಸಿದ ತಂಡದಲ್ಲಿ ಮಾಜಿ ನಾಯಕ ಬಾಬರ್ ಆಝಂ ಹೆಸರು ಇಲ್ಲದಿರುವುದು ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ. 15 ಆಟಗಾರರ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಪಾಕ್ ತಂಡದ ಆಯ್ಕೆ ಕುರಿತ ಚರ್ಚೆ ಮತ್ತೆ ಚುರುಕುಗೊಂಡಿದೆ.
ಬಾಬರ್ ಆಝಂ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಆಡುತ್ತಿರುವುದೇ ಈ ನಿರ್ಧಾರದ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇದೇ ಲೀಗ್‌ನಲ್ಲಿ ಆಡುತ್ತಿದ್ದ ಶಾದಾಬ್ ಖಾನ್ ಮಾತ್ರ ಪಾಕ್ ತಂಡದಲ್ಲಿ ಸ್ಥಾನ ಪಡೆದಿರುವುದು ಆಯ್ಕೆ ಪ್ರಕ್ರಿಯೆಯ ಬಗ್ಗೆ ಪ್ರಶ್ನೆ ಹುಟ್ಟಿಸಿದೆ.
ಇದನ್ನೂ ಓದಿ:
ಪಾಕಿಸ್ತಾನ್–ಶ್ರೀಲಂಕಾ ನಡುವಿನ ಟಿ20 ಸರಣಿ ಜನವರಿ 7ರಿಂದ ಆರಂಭವಾಗಲಿದೆ. ದಂಬುಲ್ಲಾದಲ್ಲಿ ನಡೆಯುವ ಈ ಸರಣಿಯಲ್ಲಿ ಮೂರು ಪಂದ್ಯಗಳು ನಡೆಯಲಿದ್ದು, ಜನವರಿ 7, 9 ಮತ್ತು 11ರಂದು ಪಂದ್ಯಗಳು ನಿಗದಿಯಾಗಿದೆ. ಈ ಸರಣಿಯ ನಂತರ ಪಾಕಿಸ್ತಾನ್ ತಂಡ ಟಿ20 ವಿಶ್ವಕಪ್‌ಗೆ ಸಜ್ಜಾಗಲಿದೆ.
ಟಿ20 ವಿಶ್ವಕಪ್‌ನ ಮೊದಲ ಹಂತದಲ್ಲಿ ಪಾಕಿಸ್ತಾನ್ ಭಾರತ, ನಮೀಬಿಯಾ, ನೆದರ್‌ಲೆಂಡ್ಸ್ ಹಾಗೂ ಅಮೆರಿಕ ತಂಡಗಳನ್ನು ಎದುರಿಸಲಿದೆ. ಈ ಸರಣಿಗೆ ಆಯ್ಕೆಯಾದ ಹೆಚ್ಚಿನ ಆಟಗಾರರು ವಿಶ್ವಕಪ್ ತಂಡದಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

