ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ವಜೀರಿಸ್ತಾನ್ ಜಿಲ್ಲೆಯಲ್ಲಿ ಜೂನ್ 28ರಂದು ನಡೆದ ಆತ್ಮಾಹುತಿ ಬಾಂಬ್ ದಾಳಿಗೆ ಭಾರತವೇ ಹೊಣೆ ಎಂದು ಆರೋಪಿಸಿದ ಪಾಕಿಸ್ತಾನದ ಹೇಳಿಕೆಗೆ ಭಾರತ ತಿರುಗೇಟು ನೀಡಿದೆ. ದಾಳಿಗೆ ಸಂಬಂಧಿಸಿದಂತೆ ಭಾರತ ದಾಳಿ ಮಾಡಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲದೆ ಇದ್ದರೂ, ಪಾಕಿಸ್ತಾನ ಗಂಭೀರ ಆರೋಪಗಳನ್ನು ಮಾಡಿದೆ.
ವಜೀರಿಸ್ತಾನಿನಲ್ಲಿ ನಡೆದ ಈ ಭೀಕರ ದಾಳಿಯಲ್ಲಿ 13 ಪಾಕ್ ಸೈನಿಕರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸೇನೆಯ ಜತೆಗೆ ಇನ್ನೂ 29 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 6 ಮಕ್ಕಳು ಮತ್ತು ಸೇನಾ ಸಿಬ್ಬಂದಿಯೂ ಸೇರಿದ್ದಾರೆ. ಆತ್ಮಾಹುತಿ ಬಾಂಬರ್ ಬಳಸಿದ್ದ ವಾಹನ ಮಿಲಿಟರಿ ಕಾನ್ವಾಯ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಅದೇ ಸಂದರ್ಭ ಬಾಂಬ್ ಸ್ಫೋಟಗೊಂಡಿದೆ. ಸ್ಫೋಟದಿಂದ ಹತ್ತಿರದ ಮನೆಗಳ ಛಾವಣಿ ಕುಸಿದು ಹೆಚ್ಚಿನ ಗಾಯಗಳು ಸಂಭವಿಸಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ದಾಳಿಗೆ ಉಸುದ್-ಅಲ್-ಹರ್ಬ್ ಎಂಬ ಉಗ್ರ ಸಂಘಟನೆ ಹೊಣೆ ಹೊತ್ತುಕೊಂಡಿದೆ. ಇಂತಹ ಸ್ಪಷ್ಟತೆ ಇದ್ದರೂ, ಪಾಕಿಸ್ತಾನ ಭಾರತದ ಕೈವಾಡವಿದೆ ಎಂಬ ಆರೋಪ ಮಾಡಿದೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, “ವಜೀರಿಸ್ತಾನ್ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ನೀಡಿದ ಹೇಳಿಕೆಯನ್ನು ನಾವು ಗಮನಿಸಿದ್ದೇವೆ. ಭಾರತದ ವಿರುದ್ಧ ಆಧಾರವಿಲ್ಲದ ಆರೋಪಗಳನ್ನು ಮಾಡುವ ಪಾಕಿಸ್ತಾನದ ಹೇಳಿಕೆ ತಿರಸ್ಕಾರಕ್ಕೆ ಅರ್ಹವಾಗಿದೆ,” ಎಂದು ಹೇಳಿದೆ.
Statement regarding Pakistan
🔗 : https://t.co/oQyfQiDYpr pic.twitter.com/cZkiqY1ePu
— Randhir Jaiswal (@MEAIndia) June 28, 2025