ಸತತ 12ನೇ ದಿನವೂ ಪಾಕ್‌ ಪಡೆಯಿಂದ ಕದನ ವಿರಾಮ ಉಲ್ಲಂಘನೆ: ಭಾರತೀಯ ಸೇನೆಯಿಂದ ಪ್ರತ್ಯುತ್ತರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಮ್ಮು- ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನಿ ಪಡೆಗಳು ಮತ್ತೊಮ್ಮೆ ಕದನ ವಿರಾಮವನ್ನು ಉಲ್ಲಂಘಿಸಿವೆ, ಹಲವಾರು ವಲಯಗಳಲ್ಲಿ ಅಪ್ರಚೋದಿತ ದಾಳಿಗಳನ್ನು ಮುಂದುವರೆಸಿವೆ.

ಪಾಕಿಸ್ತಾನ ಈ ರೀತಿ ಕಳೆದ 12 ದಿನಗಳಿಂದ ರಾತ್ರಿ ಹೊತ್ತು ಅಪ್ರಚೋದಿತ ದಾಳಿ ನಡೆಸುತ್ತಿವೆ. ಇದು ಎರಡೂ ರಾಷ್ಟ್ರಗಳ ನಡುವಿನ ಉದ್ವಿಗ್ನ ಪರಿಸ್ಥಿತಿಗೆ ಮತ್ತಷ್ಟು ಕಿಚ್ಚು ಹಚ್ಚಿದೆ.

ನಿನ್ನೆ ತಡರಾತ್ರಿ ಪ್ರಾರಂಭವಾದ ಪಾಕಿಸ್ತಾನಿ ಪಡೆಗಳ ಶೆಲ್ ದಾಳಿಯು ಭಾರತೀಯ ಸೇನೆಯಿಂದ ತ್ವರಿತ ಮತ್ತು ನಿರ್ಣಯದ ಪ್ರತಿಕ್ರಿಯೆಯನ್ನು ಬಯಸಿದೆ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ 26 ಜೀವಗಳನ್ನು ಬಲಿ ಪಡೆದ ಮಾರಕ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನೇರ ಪರಿಣಾಮವೇ ಈ ಗುಂಡಿನ ಚಕಮಕಿಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಏಳು ಗಡಿ ಜಿಲ್ಲೆಗಳ ಪೈಕಿ ಐದು ಜಿಲ್ಲೆಗಳಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!