ಇಂಗ್ಲೆಂಡ್‌ ಕಪ್ತಾನನ ಮಾನವೀಯ ಮುಖ: ಟೆಸ್ಟ್ ಸರಣಿಯಿಂದ ಬಂದ ಹಣ ಪಾಕ್ ಪ್ರವಾಹ ಸಂತ್ರಸ್ತರಿಗೆ ನೀಡಲಿದ್ದಾರೆ ಸ್ಟೋಕ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು ಐತಿಹಾಸಿಕ ಟೆಸ್ಟ್ ಸರಣಿಗಾಗಿ ಪ್ರಸ್ತುತ ಪಾಕಿಸ್ತಾನದಲ್ಲಿದೆ. 17 ವರ್ಷಗಳ ನಂತರ ತಂಡ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದು, ಮೂರು ಪಂದ್ಯಗಳ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಲಿದೆ.
ಡಿಸೆಂಬರ್ 1 ರಂದು ಸರಣಿಯ ಆರಂಭಿಕ ಪಂದ್ಯಕ್ಕೆ ಮುಂಚಿತವಾಗಿ, ಸ್ಟೋಕ್ಸ್ ಸೋಮವಾರ ಮಹತ್ವ ಘೋಷಣೆಯೊಂದನ್ನು ಮಾಡಿದ್ದು, ಇಡೀ ಸರಣಿಯಿಂದ ತನ್ನ ಪಂದ್ಯದ ಶುಲ್ಕವನ್ನು ಪಾಕಿಸ್ತಾನದ ಪ್ರವಾಹ ಮನವಿಗೆ ನೀಡುವುದಾಗಿ ಘೋಷಿಸಿದ್ದಾರೆ.
“ನಾನು ಈ ಟೆಸ್ಟ್ ಸರಣಿಯ ನನ್ನ ಪಂದ್ಯದ ಶುಲ್ಕವನ್ನು ಪಾಕಿಸ್ತಾನದ ಪ್ರವಾಹ ಪೀಡಿತರಿಗೆ ನೀಡುತ್ತಿದ್ದೇನೆ.” ಟ್ವಿಟರ್‌ನಲ್ಲಿ ಸ್ಟೋಕ್ಸ್ ಬರೆದುಕೊಡಿದ್ದಾರೆ. “ಈ ವರ್ಷದ ಆರಂಭದಲ್ಲಿ ಪಾಕಿಸ್ತಾನವನ್ನು ಧ್ವಂಸಗೊಳಿಸಿದ ಪ್ರವಾಹ ಪರಿಸ್ಥಿತಿಯು ತುಂಬಾ ದುಃಖಕರವಾಗಿದೆ ಮತ್ತು ದೇಶ ಮತ್ತು ಜನರ ಮೇಲೆ ಗಮನಾರ್ಹ ಪರಿಣಾಮ ಬೀರಿದೆ” ಎಂದು ಅವರು ಹೇಳಿದ್ದಾರೆ. “ಈ ದೇಣಿಗೆಯು ಪ್ರವಾಹದಿಂದ ಹೆಚ್ಚು ಹಾನಿಗೊಳಗಾದ ಪಾಕಿಸ್ತಾನದ ಪ್ರದೇಶಗಳ ಪುನರ್ನಿರ್ಮಾಣಕ್ಕೆ ಹೋಗಬಹುದು” ಎಂದು ಅವರು ಹೇಳಿದರು.
ಇಂಗ್ಲೆಂಡ್‌ನ ಕ್ರಿಕೆಟ್ ತಂಡವು 2005ರ ನಂತರ ದೇಶದಲ್ಲಿ ಮೊದಲ ಬಾರಿಗೆ ಮೂರು ಟೆಸ್ಟ್‌ಗಳನ್ನು ಆಡಲು ಭಾನುವಾರ ಮುಂಜಾನೆ ಪಾಕಿಸ್ತಾನಕ್ಕೆ ಆಗಮಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!