March 30, 2026
Monday, March 30, 2026
spot_img

ಕೋಲು ಕೊಟ್ಟು ಪೆಟ್ಟು ತಿಂದ ಪಾಕಿಸ್ತಾನ: ಅಮೆರಿಕ ಜೊತೆ ಯಾವುದೇ ಸಂಧಾನಕ್ಕೆ ಆಸಕ್ತಿ ಹೊಂದಿಲ್ಲ ಎಂದ ಇರಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಕದನ ತಾರಕ್ಕೇರುತ್ತಿದ್ದು, ಇದರ ನಡುವೆಯೂ ತಾನು ಅಮೆರಿಕ ಹಾಗೂ ಇರಾನ್ ನಡುವೆ ಸಂಧಾನ ನಡೆಸುವೆ ಎಂದು ಹೊರಟಿದ್ದ ಪಾಕಿಸ್ತಾನಕ್ಕೆ ಮುಖಭಂಗವಾಗಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಕೊನೆಗೊಳಿಸಲು ನಾನು ಸಿದ್ಧ ಎಂದು ಹೇಳಿಕೊಂಡ ಪಾಕ್ ಗೆ ಹಿನ್ನಡೆಯಾಗಿದ್ದು, ಪಾಕಿಸ್ತಾನ ನೇತೃತ್ವದ ಯಾವುದೇ ಸಂಧಾನದಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಇರಾನ್ ಖಡಕ್ ತಿರುಗೇಟು ನೀಡಿದೆ.

ಈ ಕುರಿತು ಪೋಸ್ಟ್‌ ಮಾಡಿರುವ ಮುಂಬೈನಲ್ಲಿರುವ ಇರಾನ್ ಕಾನ್ಸುಲೇಟ್ ಜನರಲ್ ಕಚೇರಿ,ಅಮೆರಿಕದೊಂದಿಗೆ ಯಾವುದೇ ನೇರ ಮಾತುಕತೆ ಇಲ್ಲ. ಅದೇ ರೀತಿ ನಾವು ಪಾಕಿಸ್ತಾನದ ಮಧ್ಯಸ್ಥಿಕೆ ಕುರಿತು ಆಸಕ್ತಿ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.

ಇಲ್ಲಿ ಅಮೆರಿಕದ ನಿಲುವು ಬದಲಾಗುತ್ತಿದ್ದು, ಇದರ ನಡುವೆ ಮಧ್ಯಸ್ಥಿಕೆ ವಹಿಸಲು ಬಂದಿರುವ ಪಾಕ್ ನಿರ್ಧಾರ ವೈಯಕ್ತಿಕ. ಸದ್ಯಕ್ಕೆ ನಾವು ಯಾವುದೇ ಕಾರಣಕ್ಕೂ ಅಮೆರಿಕದೊಂದಿಗೆ ನೇರ ಮಾತುಕತೆಯಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ಮುಂಬೈನಲ್ಲಿರುವ ಇರಾನ್ ಕಾನ್ಸುಲೇಟ್ ಜನರಲ್ ಕಚೇರಿ ಖಡಕ್ ಆಗಿ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !