ಹೊಸದಿಗಂತ ಡಿಜಿಟಲ್ ಡೆಸ್ಕ್
ಕುಟುಂಬದ ಇಚ್ಛೆಗೆ ವಿರುದ್ಧವಾಗಿ ನೃತ್ಯ ಮತ್ತು ಮಾಡೆಲಿಂಗ್ ಅನ್ನು ವೃತ್ತಿಯಾಗಿ ಆರಿಸಿಕೊಂಡ ಕಾರಣಕ್ಕಾಗಿ 21 ವರ್ಷದ ಮಹಿಳೆಯನ್ನು ಆಕೆಯ ಸಹೋದರನೇ ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಪ್ರಕರಣ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.
ಪ್ರಾಂತೀಯ ರಾಜಧಾನಿ ಲಾಹೋರ್‌ನಿಂದ 130 ಕಿಮೀ ದೂರದಲ್ಲಿರುವ ರೆನಾಲಾ ಖುರ್ದ್ ಒಕಾರಾ ಮೂಲದ ಮೃತ ಸಿದ್ರಾ, ಸ್ಥಳೀಯ ಬಟ್ಟೆ ಬ್ರ್ಯಾಂಡ್‌ಗೆ ಮಾಡೆಲಿಂಗ್ ಮಾಡುತ್ತಿದ್ದಳು ಮತ್ತು ಫೈಸಲಾಬಾದ್ ನಗರದ ಚಿತ್ರಮಂದಿರಗಳಲ್ಲಿ ನೃತ್ಯ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಕುಟುಂಬದ ಸಂಪ್ರದಾಯಕ್ಕೆ ವಿರುದ್ಧವಾಗಿರುವ ವೃತ್ತಿಯನ್ನು ತೊರೆಯುವಂತೆ ಪೋಷಕರು ಒತ್ತಾಯಿಸಿದರೂ ಅವಳು ಅವರ ಮಾತಿಗೆ ಕಿವಿಗೊಟ್ಟಿರಲಿಲ್ಲ ಮತ್ತು ಕೆಲಸವನ್ನು ಮುಂದುವರೆಸಿದ್ದಳು ಎಂದು ತಿಳಿದುಬಂದಿದೆ.
ಸಿದ್ರಾ ತನ್ನ ಕುಟುಂಬದೊಂದಿಗೆ ಈದ್ ಆಚರಿಸಲು ಫೈಸಲಾಬಾದ್‌ನಿಂದ ಮನೆಗೆ ಬಂದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಸಿದ್ರಾ ತನ್ನ ವೃತ್ತಿ ಆಯ್ಕೆ ಮತ್ತು ವೃತ್ತಿಯಲ್ಲಿನ ಸಭ್ಯತೆಯ ವಿಷಯದ ಬಗ್ಗೆ ತನ್ನ ಪೋಷಕರು ಮತ್ತು ಸಹೋದರ ಹಮ್ಜಾ ನೊಂದಿಗೆ ಜಗಳವಾಡಿದ್ದಳು. ಮಾಡೆಲಿಂಗ್ ನೃತ್ಯದಲ್ಲಿ ತೊಡಗದಂತೆ ಎಚ್ಚರಿಸಿ ಆಕೆಯನ್ನು ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಂತರ, ಹಂಜಾ ನಂತರ ಸಿದ್ರಾ ಮೇಲೆ ಗುಂಡು ಹಾರಿಸಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಮ್ಜಾ ಸಂಬಂಧಿಕರೊಬ್ಬರು ಸಿದ್ರಾ ನೃತ್ಯ ಪ್ರದರ್ಶನದ ವೀಡಿಯೊವನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಫಾರ್ವರ್ಡ್ ಮಾಡಿದ್ದನ್ನು ನಂತರ ಹಮ್ಜಾ ಕೋಪ ನೆತ್ತಿಗೇರಿತ್ತು ಎಂದು ಪೊಲೀಸ್ ಅಧಿಕಾರಿ ಫ್ರಾಜ್ ಹಮೀದ್ ತಿಳಿಸಿದ್ದಾರೆ. ಆತ ಕೋಪದ ಭರದಲ್ಲಿ ತನ್ನ ಸಹೋದರಿಯನ್ನೇ ಗುಂಡಿಕ್ಕಿ ಕೊಂದನು.
ಈ ವರ್ಷದ ಫೆಬ್ರವರಿಯಲ್ಲಿ ಪಾಕಿಸ್ತಾನದ ಫೈಸಲಾಬಾದ್‌ನಲ್ಲಿ 19 ವರ್ಷದ ಆಯೇಷಾ ಎಂಬ ನರ್ತಕಿಯನ್ನು ಆಕೆಯ ಮಾಜಿ ಪತಿ ಗುಂಡಿಕ್ಕಿ ಕೊಂದಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ