ಹೊಸದಿಗಂತ, ಬೀದರ್:
ರಾಜ್ಯ ಸಭೆ ಚುನಾವಣೆ ಫಲಿತಾಂಶದ ನಂತರ ನಾಸೀರ್ ಅಹ್ಮದ್ ವಿಜಯ ಘೋಷಣೆಯೊಂದಿಗೆ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೇಳಿ ಬಂದಿರುವುದನ್ನು ಖಂಡಿಸಿ ಬೀದರ್‌ನಲ್ಲಿಯೂ ಬಿಜೆಪಿ ಬೀದಿಗಿಳಿದು ಪ್ರತಿಭಟನೆ ನಡೆಸಿದೆ.
ಪಾಪನಾಶ ದೇವಸ್ಥಾನದ ಮುಖ್ಯದ್ವಾರದಿಂದ ಆರಂಭವಾದ ಪ್ರತಿಭಟನೆ ಬಳಿಕ ಬೀದರ ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯಾಲಯ ಬಳಿ ಮುಂದುವರಿದಿದ್ದು, ಈ ಸಂದರ್ಭ ಕಚೇರಿಗೆ ಬೀಗ ಹಾಕುವ ಪ್ರಯತ್ನ ನಡೆದಿದೆ. ಆದರೆ ಕಾಂಗ್ರೆಸ್ ಕಾರ್ಯಾಲಯಕ್ಕೆ ತೆರಳುವ ಮುಂಚೆಯೇ ಪೊಲೀಸರಿಂದ ಪ್ರತಿಭಟನಾಕಾರರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದ್ದಾರೆ.
ಪ್ರತಿಭಟನೆ ಸಂದರ್ಭ ಮಾತನಾಡಿದ ಬಿಜೆಪಿ ಬೀದರ ನಗರ ಘಟಕದ ಅಧ್ಯಕ್ಷ, ನಗರ ಸಭೆ ಸದಸ್ಯ ಶಶಿ ಹೊಸಳ್ಳಿ, ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಗೃಹ ಮಂತ್ರಿ ಪರಮೇಶ್ವರ ಅವರಿಗೆ ತಮ್ಮ ಸ್ಥಾನದಲ್ಲಿ ಕೂಡುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ. ವಿಧಾನಸಭೆ ಪರಿಸರದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆಯನ್ನು ಕಾಂಗ್ರೆಸ್‌ನ ಹಿಂಬಾಲಕರು ಕೂಗಿ 7ಕೋಟಿ ಕನ್ನಡಿಗರ ಅಪಮಾನವನ್ನು ಮಾಡಿದ್ದಾರೆ. ಆದರೂ ಇನ್ನುವರೆಗೆ ಯಾರಿಗೂ ಕೂಡ ಬಂಧಿಸಿಲ್ಲ. ಶೀಘ್ರದಲ್ಲಿ ಬಂಧಿಸದಿದ್ದಲ್ಲಿ ಬಿಜೆಪಿಯಿಂದ ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಮುಖಂಡ ರೇವಣಸಿದ್ಧಪ್ಪ ಜಲಾದೆ ಮಾತನಾಡಿ ವಿಧಾನಸಭೆ ಪರಿಸರದಲ್ಲಿ ದೇಶದ್ರೋಹಿಗಳಿಂದ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದರು ಇನ್ನೂ ರಾಜ್ಯ ಸರ್ಕಾರದಿಂದ ಯಾರ ಮೇಲೆಯೂ ಕ್ರಮವನ್ನು ತೆಗೆದುಕೊಳ್ಳದಿರುವುದು ನಾಚಿಕೆಯ ಸಂಗತಿ. ದೇಶವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡವರ ವಿರುದ್ಧ ಶೀಘ್ರದಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ಪಕ್ಷದಿಂದ ಇನ್ನೂ ತೀವ್ರವಾಗಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷರಾದ ರಾಜಕುಮಾರ ಚಿದ್ರಿ, ಬೀದರ ಗ್ರಾಮೀಣ ಘಟಕದ ಅಧ್ಯಕ್ಷರಾದ ರಾಜೇಂದ್ರ ಪೂಜಾರಿ, ಬೀದರ ದಕ್ಷಿಣ ಗ್ರಾಮೀನ ಘಟಕದ ಅಧ್ಯಕ್ಷರಾದ ರಾಜರಡ್ಡಿ, ಪಕ್ಷದ ಮುಖಂಡರಾದ ಮಹೇಶ ಪಾಲಂ, ಭೂಷಣ ಫಾಠಕ, ಗಣೇಶ ಭೋಸ್ಲೆ, ವೀರೂ ದಿಗ್ವಾಲ್, ರೋಷನ ವರ್ಮಾ, ನಿಲೇಶ ರಕ್ಷಾಳ, ಮಹೇಶ್ವರ ಸ್ವಾಮಿ, ಉಪೇಂದ್ರ ದೇಶಪಾಂಡೆ, ದೀಪಕ ಗಾದಗಿ, ದೀಪಕ ಠಾಕೂರ, ಗೋಪಾಲ, ನವೀನ ಚಿಟ್ಟಾ, ನರೇಶ ಗೌಳಿ, ಯುವ ಘಟಕದ ಶಿವಕುಮಾರ ಸ್ವಾಮಿ, ರಾಕೇಶ ಪಾಟೀಲ, ವಿರೇಶ ಸಜ್ಜನ್, ಆನಂದ ಸಾಗರ, ಶ್ರೀಮತಿ ಪ್ರಸನ್ನಾ ಲತಾ ದೇಶಪಾಂಡೆ, ಶೋಭಾ ತೆಲಂಗ, ಹೇಮಲತಾ ಜೊಷಿ, ಶ್ರೀನಿವಾಸ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.