ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಗಡಿಯಲ್ಲಿ ಮತ್ತೆ ಪಾಕಿಸ್ತಾನದ ಕಿರಿಕ್ ಹೆಚ್ಚಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಿಂದ ಭಾರತದ ಗಡಿಯೊಳಗೆ ನುಗ್ಗಿದ ಪಾಕಿಸ್ತಾನಿ ಡ್ರೋನ್‌ಗಳತ್ತ ಭಾರತೀಯ ಸೇನಾಪಡೆಗಳು ಗುಂಡಿನ ದಾಳಿ ನಡೆಸಿವೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಹಿಂದಿರುಗುವ ಮುನ್ನ ಮಂಜಕೋಟೆ ಸೆಕ್ಟರ್‌ನಲ್ಲಿ ಸ್ವಲ್ಪ ಹೊತ್ತು ಡ್ರೋನ್ ಗಳು ಹಾರಾಟ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ರಜೌರಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಎರಡನೇ ಬಾರಿಗೆ ಪಾಕಿಸ್ತಾನದ ಡ್ರೋನ್‌ಗಳ ಮೇಲೆ ಭಾರತೀಯ ಸೇನೆಯು ಗುಂಡಿನ ದಾಳಿ ನಡೆಸಿದೆ.
ಜಮ್ಮು ಮತ್ತು ಕಾಶ್ಮೀರದ ಎಲ್‌ಒಸಿಯಲ್ಲಿ ಡ್ರೋನ್‌ಗಳು ಕಾಣಿಸಿಕೊಂಡ ನಂತರ ಭಾರತೀಯ ಸೇನೆಯು ಮಾನವರಹಿತ ವೈಮಾನಿಕ ವ್ಯವಸ್ಥೆ ಮಾಡಿರುವುದಾಗಿ ರಕ್ಷಣಾ ಮೂಲಗಳು ತಿಳಿಸಿವೆ.
ರಾತ್ರಿ 7 ಗಂಟೆ ಸುಮಾರಿಗೆ ರಜೌರಿಯ ಚಿಂಗಸ್ ಪ್ರದೇಶದಲ್ಲಿ ಪಾಕ್ ಡ್ರೋನ್ ಗಳು ಭಾರತದ ಗಡಿ ಪ್ರವೇಶಿಸಿದಾಗ ಸೇನಾಪಡೆ ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಡ್ರೋನ್‌ಗಳು ನಾಪತ್ತೆಯಾಗಿದ್ದು, ಪಾಕ್ ನತ್ತ ಹೋಗಿವೆ.


