ಯುಪಿಎ ಅವಧಿಯಲ್ಲಿ ಭಾರತಕ್ಕೆ ಹೋಗಿದ್ದಾಗ ಐಎಸ್‌ಐ ಗಾಗಿ ಗೂಢಚಾರ್ಯೆ ನಡೆಸಿದ್ದೆ: ಪಾಕ್‌ ಪತ್ರಕರ್ತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ 2002ರಿಂದ 2010ರ ಅವಧಿಯಲ್ಲಿ ತಾನು 5 ಭಾರಿ ಭಾರತಕ್ಕೆ ಹೋಗಿದ್ದು ಅಲ್ಲಿನ ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸಿ ಪಾಕ್‌ ಗೂಢಾಚಾರ ಸಂಸ್ಥೆ ಐಎಸ್‌ಐಗೆ ರವಾನಿಸಿದ್ದಾಗಿ ಪಾಕ್‌ ಪತ್ರಕರ್ತನೊಬ್ಬ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ.
ಪಾಕಿಸ್ತಾನದ ಹಿರಿಯ ಪತ್ರಕರ್ತ- ಅಂಕಣಕಾರ ನುಸ್ರತ್ ಮಿರ್ಜಾ ವಾಹಿನಿಯೊಂದಕ್ಕೆ ಸಂದರ್ಶನ ನೀಡುವ ವೇಳೆ ಈ ವಿಚಾರ ಬಾಯಿ ಬಿಟ್ಟಿದ್ದಾರೆ. ತಮ್ಮ ಭಾರತ ಪ್ರವಾಸದ ಸಮಯದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಗಾಗಿ ಗೂಢಚಾರಿಕೆ ನಡೆಸಿರುವುದನ್ನು ಆತ ಒಪ್ಪಿಕೊಂಡಿದ್ದಾನೆ.
ಸಾಮಾನ್ಯವಾಗಿ, ಪಾಕಿಸ್ತಾನಿಗಳು ಭಾರತಕ್ಕೆ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದಾಗ, ಮೂರು ಸ್ಥಳಗಳಿಗೆ ಭೇಟಿ ನೀಡಲು ಮಾತ್ರ ಅನುಮತಿಸುತ್ತಾರೆ. ಆದರೆ,  ನನ್ನ ಭೇಟಿ ಸಂದರ್ಭದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವರಾಗಿದ್ದ ಖುರ್ಷಿದ್ ಕಸೂರಿ ಅವರು ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಅಲ್ಲಿನ ಏಳು ನಗರಗಳಿಗೆ ವೀಸಾ ಪಡೆಯಲು ನನಗೆ ಸಹಾಯ ಮಾಡಿದರು ಎಂದು ಆತ ಹೇಳಿದ್ದಾನೆ.
“ನಾನು ಐದು ಬಾರಿ ಭಾರತಕ್ಕೆ ಭೇಟಿ ನೀಡಿದ್ದೇನೆ. ಈ ಸಂದರ್ಭದಲ್ಲಿ ದೆಹಲಿ, ಬೆಂಗಳೂರು, ಚೆನ್ನೈ, ಪಾಟ್ನಾ ಮತ್ತು ಕೋಲ್ಕತ್ತಾಗೆ ಭೇಟಿ ನೀಡಿದ್ದೇನೆ. 2007 ರಿಂದ 2010 ರ ಅವಧಿಯಲ್ಲಿ ದೆಹಲಿ ಮತ್ತು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ನಡೆದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ. 2009 ರಂದು ದೆಹಲಿಯ ಒಬೆರಾಯ್ ಹೋಟೆಲ್‌ನಲ್ಲಿ ನಡೆದ ಭಯೋತ್ಪಾದನೆ ವಿರುದ್ಧದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಸಹ  ಪಾಲ್ಗೊಂಡಿದ್ದೆ. ಈ ಸಂದರ್ಭದಲ್ಲಿ ಪಾಕಿಸ್ತಾನಿ ಲೇಖಕರನ್ನು ಅಹ್ಮದ್ ಬುಖಾರಿ, ಜಾಮಾ ಮಸೀದಿಯ ಶಾಹಿ ಇಮಾಮ್ ಮತ್ತು ಯಾಹ್ಯಾ ಬುಖಾರಿ ಸ್ವಾಗತಿಸಿದ್ದರು.
ಜಾಮಾ ಮಸೀದಿ ಯುನೈಟೆಡ್ ಫೋರಂ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂದಿನ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತು ಸಂಪುಟ ಸಚಿವ ಗುಲಾಂ ನಬಿ ಆಜಾದ್ ಕೂಡ ಭಾಗವಹಿಸಿದ್ದರು. ಮಧು ಕಿಶ್ವರ್ ಸೇರಿದಂತೆ ಇತರೆ ಆಹ್ವಾನಿತರಿದ್ದರು.
” ಖುರ್ಷಿದ್ [ಪಾಕಿಸ್ತಾನದ ಮಂತ್ರಿ] ನಾನು ಭಾರತದಿಂದ ತಂದ ಮಾಹಿತಿಯ ಬಗ್ಗೆ ಉತ್ಸುಕರಾಗಿದ್ದರು, ಅದನ್ನು ʼಪಾಕ್ ಸೇನಾ ಮುಖ್ಯಸ್ಥ ಜನರಲ್ ಅಶ್ಫಾಕ್ ಪರ್ವೇಜ್ ಕಯಾನಿʼ ಅವರಿಗೆ ಹಸ್ತಾಂತರಿಸುವಂತೆ ಕೇಳಿದರು. ʼನಾನು ಅವರಿಗೆ ನೇರವಾಗಿ ಮಾಹಿತಿಯನ್ನು ಹಸ್ತಾಂತರಿಸುವುದಿಲ್ಲʼ ಎಂದು ಹೇಳಿದೆ, ಆದರೆ ನೀವು(ಖುರ್ಷಿದ್) ಬಯಸಿದರೆ, ಎಲ್ಲಾ ಮಾಹಿತಿಯನ್ನು ನೀಡುತ್ತೇನೆ ಎಂದು ಉತ್ತರಿಸಿದೆ. ಆ ಬಳಿಕ ನಾನು ನೀಡಿದ ಮಾಹಿತಿಯನ್ನು ಅವರು ಕಯಾನಿಗೆ ಹಸ್ತಾಂತರಿಸಿದರು,” ಎಂದು ಆತ ಹೇಳಿದ್ದಾನೆ.
“ಆ ಬಳಿಕ ಕಯಾನಿ ನನಗೆ ಕರೆ ಮಾಡಿ ಈ ಕುರಿತಾಗಿ ಇನ್ನೂ ಹೆಚ್ಚಿನ ಮಾಹಿತಿ ಸಿಗಬಹುದೇ ಎಂದು ಕೇಳಿದರು. ನಾನು ನೀಡಿದ ಮಾಹಿತಿಯ ಮೇಲೆ ಕೆಲಸ ಮಾಡುವಂತೆ ಕೇಳಿದೆ. ನನಗೆ ಭಾರತದ ನಾಯಕತ್ವದಲ್ಲಿನ ದೌರ್ಬಲ್ಯಗಳ ಬಗ್ಗೆ ತಿಳಿದಿತ್ತು ಎಂದು ನುಸ್ರತ್ ಮಿರ್ಜಾ ಹೇಳಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!