ಪಾಕ್‌ ಜನರಿಗಿಲ್ಲ ಸಾಮಾಜಿಕ ಜಾಲತಾಣಗಳ ಬಳಕೆ ಭಾಗ್ಯ, ವಾಟ್ಸಾಪ್‌, ಇನ್ಸ್ಟಾ, ಎಫ್‌ಬಿ ಎಲ್ಲವೂ ಬ್ಯಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಾಕ್‌ ಜನರಿಗೆ ಸಾಮಾಜಿಕ ಜಾಲತಾಣಗಳ ಬಳಕೆ ಭಾಗ್ಯವೇ ಇಲ್ಲದಂತಾಗಿದ್ದು, ವಾಟ್ಸಾಪ್‌, ಇನ್ಸ್ಟಾ, ಎಫ್‌ಬಿ ಹಾಗೂ ಯುಟ್ಯೂಬ್‌ ಕೂಡ ನಿಷೇಧ ಮಾಡಲಾಗಿದೆ.

ಪಾಕಿಸ್ತಾನ ಸರ್ಕಾರ ಸಾಮಾಜಿಕ ಮಾಧ್ಯಮಗಳಾದ ಯೂಟ್ಯೂಬ್​, ವಾಟ್ಸಾಪ್, ಫೇಸ್​ಬುಕ್, ಇನ್​ಸ್ಟಾಗ್ರಾಂ ಹಾಗೂ ಟಿಕ್​ಟಾಕ್ ನಿಷೇಧಕ್ಕೆ ಮುಂದಾಗಿದ್ದು, ಇದು ಕೆಲವು ದಿನಗಳವರೆಗೆ ಮಾತ್ರ ಎನ್ನಲಾಗಿದೆ. ಜುಲೈ 13ರಿಂದ 18ರವರೆಗೆ ಆರು ದಿನಗಳ ಕಾಲ ಇವುಗಳಿಗೆ ನಿಷೇಧ ಹೇರಲಾಗಿದೆ. ಮೊಹರಂ ತಿಂಗಳಿನಲ್ಲಿ ದ್ವೇಷಪೂರಿತ ಭಾಷಣವಾಗಲಿ, ತಪ್ಪು ಮಾಹಿತಿಯಾಗಲಿ ರವಾನೆಯಾಗದಂತೆ ನೋಡಿಕೊಳ್ಳಲು ಪಂಜಾಬ್ ಮುಖ್ಯಮಂತ್ರಿ ಮರ್ಯಮ್ ನವಾಜ್ ಈ ಕ್ರಮ ಕೈಗೊಂಡಿದ್ದಾರೆ.

ಪಾಕಿಸ್ತಾನ ಸರ್ಕಾರವು ಇದಕ್ಕಾಗಿ ಸಂಪೂರ್ಣವಾಗಿ ಸಿದ್ಧವಾಗಿದೆ. ಮರ್ಯಮ್ ನವಾಜ್ ಅವರ ಕಾನೂನು ಮತ್ತು ಸುವ್ಯವಸ್ಥೆಯ ಸಂಪುಟ ಸಮಿತಿಯು ಈ ಪ್ರಸ್ತಾಪವನ್ನು ಮಂಡಿಸಿದೆ. ಈ ಮೂಲಕ ಸಂಸ್ಕೃತಿಯ ಬಗ್ಗೆ ದ್ವೇಷ ಹರಡುವುದನ್ನು ಮತ್ತು ಯಾವುದೇ ಅಪಪ್ರಚಾರವನ್ನು ಪ್ರಚಾರ ಮಾಡುವುದನ್ನು ಹೆಚ್ಚಿನ ಪ್ರಮಾಣದಲ್ಲಿ ನಿಲ್ಲಿಸಬಹುದು ಎಂಬುದು ಅವರ ಅಭಿಪ್ರಾಯವಾಗಿದೆ. ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸುವಂತೆ ಮರ್ಯಮ್ ನವಾಜ್ ಅವರು ದೇಶದ ಪ್ರಧಾನಿ ಬಳಿ ಮನವಿ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!