ಹೊಸದಿಗಂತ ಡಿಜಿಟಲ್ ಡೆಸ್ಕ್:
2025ರ ಐಪಿಎಲ್ ಋತುವಿನಲ್ಲಿ ಯಾವುದೇ ತಂಡ ಖರೀದಿಸದಿರುವುದರಿಂದ ಐಪಿಎಲ್‌ನಿಂದ ಸಂಪೂರ್ಣವಾಗಿ ಹೊರಗುಳಿದ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಈಗ ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಪಾದಾರ್ಪಣೆಗೆ ಸಿದ್ಧರಾಗಿದ್ದಾರೆ.
ಕರಾಚಿ ಕಿಂಗ್ಸ್ (Karachi Kings) ತಂಡವು ಪಿಎಸ್‌ಎಲ್ ಇತಿಹಾಸದ ಅತ್ಯಂತ ದುಬಾರಿ ಖರೀದಿಯಾಗಿ ವಾರ್ನರ್‌ರನ್ನು 2.58 ಕೋಟಿ ರೂಪಾಯಿಗೆ ಸ್ವಾಧೀನಪಡಿಸಿಕೊಂಡಿದೆ. ಜೊತೆಗೆ ತಂಡದ ನಾಯಕತ್ವದ ಜವಾಬ್ದಾರಿಯನ್ನೂ ವಹಿಸಲಾಗಿದೆ.
ಪಿಎಸ್‌ಎಲ್ ಆರಂಭಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ವಾರ್ನರ್‌ಗೆ ಪಾಕಿಸ್ತಾನಿ ವರದಿಗಾರನೊಬ್ಬ “ಐಪಿಎಲ್ ನಲ್ಲಿ ನೀವು ಮಾರಾಟವಾಗದಿದ್ದ ಬಳಿಕ, ಪಿಎಸ್‌ಎಲ್‌ನಲ್ಲಿ ಆಡುತ್ತಿರುವುದಕ್ಕೆ ಭಾರತೀಯ ಅಭಿಮಾನಿಗಳು ನಿಮ್ಮನ್ನು ಟ್ರೋಲ್ ಮಾಡುತ್ತಿದ್ದಾರೆ, ಇದಕ್ಕೆ ನಿಮ್ಮ ಉತ್ತರವೇನು?” ಎಂದು ಕೇಳಿದ್ದಾನೆ.
ಇದಕ್ಕೆ ವಾರ್ನರ್ ಖಡಕ್ ಆಗಿ ಉತ್ತರಿಸಿದ್ದು, ಇದೇ ಮೊದಲ ಬಾರಿಗೆ ಇಂತಹ ವಿಷಯ ಕೇಳುತ್ತಿದ್ದೇನೆ. ನನಗೆ ಕ್ರಿಕೆಟ್ ಆಡುವುದಷ್ಟೇ ಗೊತ್ತು. ಪಿಎಸ್‌ಎಲ್‌ನಲ್ಲಿ ಅವಕಾಶ ಸಿಕ್ಕಿದೆ, ಇದನ್ನು ಆನಂದಿಸಲು ಬಯಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.