ಪಾಕಿಸ್ತಾನದ ಜಾಫರ್ ಎಕ್ಸ್‌ಪ್ರೆಸ್ ರೈಲು ಹೈಜಾಕ್: ಬಲೂಚ್ ಲಿಬರೇಶನ್ ಆರ್ಮಿ ಯಿಂದ ವಿಡಿಯೋ ರಿಲೀಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಬಲೂಚ್ ಲಿಬರೇಶನ್ ಆರ್ಮಿ ಹೈಜಾಕ್ ಮಾಡಿದ್ದು,ಈ ಕುರಿತು ವೀಡಿಯೊವನ್ನು ಬಿಡುಗಡೆ ಮಾಡಿದೆ.

ಬಲೂಚ್ ಲಿಬರೇಶನ್ ಆರ್ಮಿಯ ಮಾಧ್ಯಮ ವಿಭಾಗ ಹಕ್ಕಲ್, ಈ ಹೈಜಾಕ್‌ಗೆ ಮಾರ್ಚ್ 2025 ದರ್ರಾ-ಎ-ಬೋಲನ್ 2.0 ಎಂಬ ಹೆಸರು ಕೊಟ್ಟು, ಎಕ್ಸ್‌ನಲ್ಲಿ ವೀಡಿಯೋ ಬಿಡುಗಡೆ ಮಾಡಿದೆ. ವೀಡಿಯೋದಲ್ಲಿ ಬಲೂಚ್ ಹೋರಾಟಗಾರರು ರೈಲ್ವೆ ಹಳಿಯನ್ನು ಸ್ಫೋಟಿಸುವುದು, ಹಳಿಗಳ ಮೇಲೆ ಸ್ಫೋಟಕಗಳನ್ನು ಎಸೆಯುವುದು ಸೆರೆಯಾಗಿದೆ.ರೈಲಲ್ಲಿರುವ ಪ್ರಯಾಣಿಕರನ್ನು ವೀಡಿಯೋದಲ್ಲಿ ಸೆರೆಹಿಡಿಯಲಾಗಿದೆ.‌

ಪಾಕ್‌ ವಿರುದ್ಧದ ಬಿಎಲ್‌ಎ ನಿಯಂತ್ರಣವನ್ನು ಒತ್ತಿಹೇಳುವ ಕಾರ್ಯಾಚರಣೆಯ ಮೊದಲ ಸಮಗ್ರ ವೀಡಿಯೋ ಇದಾಗಿದೆ. ವೀಡಿಯೊದಲ್ಲಿ ಬಿಎಲ್‌ಎ ಹೋರಾಟಗಾರನೊಬ್ಬ, ನಮ್ಮ ಹೋರಾಟ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಂತಕ್ಕೆ ಬಂದಿದೆ. ನಮ್ಮ ಯುವಕರು ಅಂತಹ ಕ್ರಮಗಳನ್ನು ತೆಗೆದುಕೊಳ್ಳಲು ಸಜ್ಜಾಗಿದ್ದಾರೆ. ಹೋರಾಟದಂತಹ ನಿರ್ಧಾರಗಳನ್ನು ಹೊರತುಪಡಿಸಿ ಬೇರೆ ಯಾವುದೇ ಆಯ್ಕೆಗಳು ನಮಗೆ ಉಳಿದಿಲ್ಲ. ಬಂದೂಕನ್ನು ನಿಲ್ಲಿಸಲು ಬಂದೂಕಿನ ಅಗತ್ಯವಿದೆ ಎಂದಿದ್ದಾನೆ.

https://x.com/bahot_baluch/status/1924195937057997110?ref_src=twsrc%5Etfw%7Ctwcamp%5Etweetembed%7Ctwterm%5E1924195937057997110%7Ctwgr%5Eb8effa211346258686f6aee2be7f55da9163233e%7Ctwcon%5Es1_&ref_url=https%3A%2F%2Fpublictv.in%2Fjaffar-express-hijack-bla-releases-video-on-train-capture-our-struggle-has-come-to-a-point-where%2F

ಮಾ.11 ರಂದು 400 ಪ್ರಯಾಣಿಕರಿದ್ದ ಪಾಕಿಸ್ತಾನದ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು  ಬಲೂಚಿಸ್ತಾನ್‌ ಪ್ರಾಂತ್ಯದ ಪ್ರತ್ಯೇಕತಾ ವಾದಿ ಹೋರಾಟಗಾರರ ಗುಂಪು ಬೋಲಾನ್‌ ಪ್ರದೇಶದಲ್ಲಿ ಹೈಜಾಕ್‌ ಮಾಡಿತ್ತು. ಗುಂಪು, ರೈಲಲ್ಲಿದ್ದ ಕನಿಷ್ಠ 21 ಪ್ರಯಾಣಿಕರು ಮತ್ತು ನಾಲ್ವರು ಅರೆಸೈನಿಕ ಪಡೆ ಯೋಧರ ಹತ್ಯೆ ಮಾಡಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!