ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಉಗ್ರ ನೆಲೆ ಧ್ವಂಸಗೊಳಿಸಿದ್ದ ಆಪರೇಷನ್ ಸಿಂದೂರದ ಮತ್ತೊಂದು ವಿಡಿಯೋವನ್ನು ವೆಸ್ಟರ್ನ್ ಕಮಾಂಡ್ ಇದೀಗ ಬಿಡುಗಡೆ ಮಾಡಿದೆ.
ಉಗ್ರರ ವಿರುದ್ಧದ ಕಾರ್ಯಾಚರಣೆಯ ಪ್ಲ್ಯಾನ್, ತರಬೇತಿ ಮತ್ತು ಕಾರ್ಯಾಚರಣೆ ಕುರಿತಾದ ವಿಡಿಯೋ ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ಪಹಲ್ಗಾಮ್ ದಾಳಿಗೆ ಇದು ಪ್ರತೀಕಾರವಲ್ಲ, ನ್ಯಾಯ ಎಂದು ಸೇನೆ ಹೇಳಿಕೊಂಡಿದೆ.
ಆಪರೇಷನ್ ಸಿಂದೂರವನ್ನು ಹೇಗೆ ಯೋಜಿಸಲಾಯಿತು, ತರಬೇತಿ ನೀಡಲಾಯಿತು ಮತ್ತು ಕಾರ್ಯಗತಗೊಳಿಸಲಾಯಿತು ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
Planned, trained & executed.
Justice served.@adgpi@prodefencechan1 pic.twitter.com/Hx42p0nnon
— Western Command – Indian Army (@westerncomd_IA) May 18, 2025