ಬೆಳಗ್ಗೆ ಗಡಿಬಿಡಿಯಲ್ಲಿ ಬೇಗನೆ ತಯಾರಿಸಬಹುದಾದ, ಜೊತೆಗೆ ಹೊಟ್ಟೆ ತುಂಬುವ ಬ್ರೇಕ್ಫಾಸ್ಟ್ ಬೇಕೆಂದರೆ ಪನೀರ್ ಭುರ್ಜಿ ಬೆಸ್ಟ್. ಬಿಸಿ ಬಿಸಿ ಚಪಾತಿಯ ಜೊತೆ ಇದನ್ನು ಸರ್ವ್ ಮಾಡಿದರೆ ಮನೆಯವರಿಗೂ ತುಂಬ ಇಷ್ಟವಾಗುತ್ತದೆ. ಕೇವಲ 10 ನಿಮಿಷಗಳಲ್ಲಿ ಈ ರುಚಿಯಾದ ಡಿಶ್ ರೆಡಿ ಮಾಡಬಹುದು.
ಬೇಕಾಗುವ ಪದಾರ್ಥಗಳು
ಪನೀರ್ – 200 ಗ್ರಾಂ
ಈರುಳ್ಳಿ – 1 ಸಣ್ಣದು (ಸಣ್ಣವಾಗಿ ಕತ್ತರಿಸಿದ್ದು)
ಟೊಮ್ಯಾಟೊ – 1
ಹಸಿಮೆಣಸಿನಕಾಯಿ – 1 ಅಥವಾ 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಅರಿಶಿನ – ಚಿಟಿಕೆ
ಮೆಣಸಿನ ಪುಡಿ – ½ ಟೀ ಸ್ಪೂನ್
ಗರಂ ಮಸಾಲಾ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ/ತುಪ್ಪ – 1 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ
ಮೊದಲು ಪ್ಯಾನ್ನಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ. ಅದಕ್ಕೆ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಸ್ವಲ್ಪ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ.
ಇದಕ್ಕೆ ಟೊಮ್ಯಾಟೊ, ಅರಿಶಿನ, ಉಪ್ಪು, ಮೆಣಸಿನ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಮೃದುವಾಗುವವರೆಗೆ ಬೇಯಿಸಿ. ನಂತರ ಚೂರು ಮಾಡಿದ ಪನೀರ್ ಹಾಕಿ 2-3 ನಿಮಿಷ ಚೆನ್ನಾಗಿ ಕಲಸಿ.
ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಬಿಸಿ ಚಪಾತಿಯ ಜೊತೆ ಸರ್ವ್ ಮಾಡಿ. ಬೆಳಗಿನ ಗಡಿಬಿಡಿಗೂ ಸೂಪರ್ ಟೇಸ್ಟಿ ಬ್ರೇಕ್ಫಾಸ್ಟ್ ರೆಡಿ!



