ಕೆಂಪು ಹರಿವೆ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆದು. ರಕ್ತಹೀನತೆ ಕಡಿಮೆ ಮಾಡಲು, ದೇಹಕ್ಕೆ ಶಕ್ತಿ ಕೊಡಲು ಇದು ತುಂಬಾ ಸಹಾಯ ಮಾಡುತ್ತದೆ. ಸಾದಾ ಊಟಕ್ಕೆ ಸೈಡ್ ಡಿಶ್ ಆಗಿ ಈ ಪಲ್ಯ ಮಾಡಿದ್ರೆ ರುಚಿಯಾಗಿರುತ್ತೆ.
ಬೇಕಾಗುವ ಸಾಮಗ್ರಿಗಳು:
ಕೆಂಪು ಹರಿವೆ ಸೊಪ್ಪು – 2 ಕಪ್ (ಸೊಪ್ಪು ತೊಳೆದು ಸಣ್ಣದಾಗಿ ಕತ್ತರಿಸಿದ್ದು)
ಈರುಳ್ಳಿ – 1 (ಚಿಕ್ಕದಾಗಿ ಕತ್ತರಿಸಿದ)
ಹಸಿಮೆಣಸಿನಕಾಯಿ – 2
ಬೆಳ್ಳುಳ್ಳಿ – 3-4 ಕಳಿ
ಸಾಸಿವೆ – 1/2 ಚಮಚ
ಜೀರಿಗೆ – 1/2 ಚಮಚ
ಉದ್ದಿನ ಬೇಳೆ – 1 ಚಮಚ
ಅರಿಶಿನ ಪುಡಿ – 1 ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ತುರಿದ ತೆಂಗಿನಕಾಯಿ – 2 ಚಮಚ
ಎಣ್ಣೆ – 2 ಚಮಚ
ಮಾಡುವ ವಿಧಾನ:
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ, ಉದ್ದಿನ ಬೇಳೆ ಹಾಕಿ ಹುರಿಯಿರಿ. ಈಗ ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿಕೊಳ್ಳಿ. ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
ನಂತರ ಕತ್ತರಿಸಿದ ಕೆಂಪು ಹರಿವೆ ಸೊಪ್ಪು ಸೇರಿಸಿ, ಸ್ವಲ್ಪ ನೀರು ಹಾಕಿ ಮುಚ್ಚಿ ಬೇಯಲು ಬಿಡಿ. ಸೊಪ್ಪು ಚೆನ್ನಾಗಿ ಬೆಂದ ನಂತರ ತುರಿದ ತೆಂಗಿನಕಾಯಿ ಹಾಕಿ ಮಿಕ್ಸ್ ಮಾಡಿ.



